ಕೇರಳ ರಾಜ್ಯದ 'ಪಿಂಕ್ ಪೊಲೀಸ್ ಪೆಟ್ರೋಲಿಂಗ್' ವಾಹನ (ಸಂಗ್ರಹ ಚಿತ್ರ)
ಬೆಂಗಳೂರು: ಮಹಿಳಾ ಸುರಕ್ಷತೆ ಮತ್ತು ಭದ್ರತೆಗೆ ಕೇರಳ ರಾಜ್ಯ ಮಾದರಿಯಲ್ಲಿ 'ಪಿಂಕ್ ಪೊಲೀಸ್ ಪೆಟ್ರೋಲಿಂಗ್' ಆರಂಭಿಸಲು ರಾಜ್ಯ ಸರ್ಕಾರ ಗುರುವಾರ ಚಿಂತನೆ ನಡೆಸಿದೆ.
ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು ಪಿಂಕ್ ಹೊಯ್ಸಳ ಸದ್ಯದಲ್ಲಿ ನಗರದಲ್ಲಿ ಗಸ್ತು ತಿರುಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಬಿಜೆಪಿಯ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಬೆಂಗಳೂರು ನಗರದಲ್ಲಿ ಪಿಂಕ್ ಪೊಲೀಸ್ ಗಸ್ತು ನಡೆಸಲಾಗುವುದು. ಎಲ್ಲೆಲ್ಲಿ ಈ ಪೆಟ್ರೋಲಿಂಗ್ ಆರಂಭಿಸಬೇಕೆಂದು ಗುರುತಿಸಲಾಗಿದೆ. ಒಟ್ಟು 51 ಪಿಂಕ್ ಹೊಯ್ಸಳ ಸೇವೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಪ್ರತಿ ಪಿಂಕ್ ಹೊಯ್ಸಳದಲ್ಲಿ ಕನಿಷ್ಠ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿ ಹಾಗೂ 3 ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಶೀಘ್ರದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics