ಕೋಲಾರ: ವಸತಿ ಪ್ರದೇಶದಲ್ಲಿ 80 ಅಡಿ ಕುಸಿದ ಭೂಮಿ, ಸಾರ್ವಜನಿಕರಲ್ಲಿ ಆತಂಕ
ಕೆಜಿಎಫ್ ನ ಮಂಜುನಾಥನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ,....
ಕೋಲಾರ: ಕೆಜಿಎಫ್ ನ ಮಂಜುನಾಥನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ, ರಸ್ತೆ ಪಕ್ಕದಲ್ಲೇ 80 ಅಡಿ ಆಳದ ಬೃಹತ್ ಗಾತ್ರದ ಗುಂಡಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಕೆಜಿಎಫ್‌ನ ಉರಿಗಂಪೇಟೆಯ ಮಂಜುನಾಥ್ ನಗರದಲ್ಲಿ ಸುಮಾರು 80 ಅಡಿ ಆಳ ಮತ್ತು ೧೦ ಅಡಿ ಅಗಲದ ಗುಂಡಿಯೊಂದು ಏಕಾಏಕಿ ನಿರ್ಮಾಣವಾಗಿದ್ದು, ಇಲ್ಲಿ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಭೂಕಂಪನ ಅಳೆಯುವ ಎನ್‌ಐಆರ್‌ಎಂ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿ, ಇಲ್ಲಿ ಯಾವುದೇ ಭೂಕಂಪನ ನಡೆದಿಲ್ಲ. ಅದು ಮಳೆಯಿಂದಾಗಿ ಗುಂಡಿ ನಿರ್ಮಾಣವಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೆಜಿಎಫ್‌ನಲ್ಲಿ ಈ ಹಿಂದೆ ಚಿನ್ನದ ಗಣಿಗಾರಿಕೆಗೆ ನಡೆಯುತ್ತಿತ್ತು. ಅದರಿಂದಾಗಿಯೇ ಇಲ್ಲಿ ಆಗಾಗ ಇಂತಹ ಗುಂಡಿಗಳು ನಿರ್ಮಾಣವಾಗುತ್ತವೆ ಎಂದು ಸ್ಥಳೀಯ ನಿವಾಸಿ ರಾಮಕೃಷ್ಣ ಅವರು ತಿಳಿಸಿದ್ದಾರೆ.