ಇಂದಿರಾ ಕ್ಯಾಂಟೀನ್ (ಸಂಗ್ರಹ ಚಿತ್ರ) 
ರಾಜ್ಯ

ವಿವಿಧ ಜಿಲ್ಲೆಗಳ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನು ಮುಂದೆ ಟೀ. ಕಾಫಿ ಕೂಡ ಲಭ್ಯ!

ಬೆಂಗಳೂರು ಹೊರವಲಯದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನು ಮುಂದೆ ಕೇವಲ ರೂ.1.50ಕ್ಕೆ ಟೀ ಹಾಗೂ ಕಾಫಿ ಕೂಡ ಲಭ್ಯವಾಗಲಿದೆ. ಜೊತೆಗೆ ರೂ.10ಕ್ಕೆ ಊಟ ಹಾಗೂ ರೂ.5ಕ್ಕೆ ತಿಂಡಿ ಸಿಗಲಿದ್ದು, ಡಿಸೆಂಬರ್ ಅಂತ್ಯದ ವೇಳೆ ಬೆಂಗಳೂರು...

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನು ಮುಂದೆ ಕೇವಲ ರೂ.1.50ಕ್ಕೆ ಟೀ ಹಾಗೂ ಕಾಫಿ ಕೂಡ ಲಭ್ಯವಾಗಲಿದೆ. ಜೊತೆಗೆ ರೂ.10ಕ್ಕೆ ಊಟ ಹಾಗೂ ರೂ.5ಕ್ಕೆ ತಿಂಡಿ ಸಿಗಲಿದ್ದು, ಡಿಸೆಂಬರ್ ಅಂತ್ಯದ ವೇಳೆ ಬೆಂಗಳೂರು ಹೊರವಲಯಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ. 
ಆರಂಭಿಕ ದಿನಗಳಲ್ಲಿ ನಗರದ ಇಂದಿರಾ ಕ್ಯಾಂಟೀನ್ ನಲ್ಲಿ ದೊರಕುವಂತೆ ಎಲ್ಲಾ ರೀತಿಯ ಆಹಾರಗಳು ಬೆಂಗಳೂರು ಹೊರ ವಲಯದದ ಕ್ಯಾಂಟೀನ್ ಗಳಲ್ಲೂ ಲಭ್ಯವಿರಲಿದ್ದು. ಇದರ ಜೊತೆಗ ಟೀ ಹಾಗೂ ಕಾಫೀ ಕೂಡ ದೊರಕಲಿದೆ. 
ಬೆಂಗಳೂರು ಹೊರವಲಯದ ಬಹುತೇಕ ಇಂದಿರಾ ಕ್ಯಾಂಟೀನ್ ಗಳು ಬಸ್ ನಿಲ್ದಾಣಗಳ ಬಳಿ ಹಾಗೂ ಜನರಿಗೆ ಸುಲಭ ಬರಲು ಸಹಾಯಕವಾಗುವ ಸ್ಥಳದಲ್ಲಿಯೇ ಸ್ಥಾಪನೆ ಮಾಡಲಾಗುತ್ತಿದೆ. 
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಲಭ್ಯವಾಗಲಿದೆ. ಬೆಂಗಳೂರಿನಾದ್ಯಂತ ಸುಮಾರು 70 ದಿನಗಳಲ್ಲಿ 101 ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್ ನಲ್ಲಿ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸಿಗುವಂತೆ ಯೋಜನೆ ಪ್ರಕಟಿಸಿ, ಇದಕ್ಕಾಗಿ ರೂ.100 ಕೋಟಿಯನ್ನು ಮೀಸಲಿಟ್ಟಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಬಡವರಿಗಾಗಿ 198 ಸಬ್ಡಿಡಿ ಆಹಾರ ಕೇಂದ್ರಗಳನ್ನು ಕೆಲವು ತಿಂಗಳೊಳಗೆ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. 
ಇದರತೆ ಆಗಸ್ಟ್ ತಿಂಗಳಲ್ಲಿ 101 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲಾಗಿದೆ. 120 ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಎಲ್ಲಾ ಕ್ಯಾಂಟೀನ್ ಗಳು ತಮ್ಮ ಕಾರ್ಯಗಳನ್ನು ಆರಂಭಿಸಲಿವೆ. 
ಕೇವಲ ನಗರದಲ್ಲಷ್ಟೇ ಅಲ್ಲದೆ, ನಗರದ ಹೊರವಲಯದಲ್ಲೂ ಬಿಬಿಎಂಪಿ ವ್ಯಾಪ್ತಿ ಹೊರಗೆ 250 ಕ್ಯಾಂಟೀನ್ ಗಳನ್ನು ತರೆಯಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. 
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಳೇ ಮೈಸೂರಿನಲ್ಲಿ ಒಟ್ಟು 99 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತಿದ್ದು, 1 ಲಕ್ಷ ಇರುವ ಪ್ರತೀ ಪ್ರದೇಶದಲ್ಲಿ ಒಂದೊಂದು ಕ್ಯಾಂಟೀನ್ ಗಳನ್ನು ತೆರೆಯಲುಸರ್ಕಾರ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕ್ಯಾಂಟೀನ್ ನಂತೆಯೇ ಇತರೆ ಕ್ಯಾಂಟೀನ್ ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಇದರಲ್ಲಿ ಅಡುಗೆಮನೆ ಹಾಗೂ ಕ್ಯಾಂಟೀನ್ ಒಂದೇ ಸ್ಥಳದಲ್ಲಿರುತ್ತದೆ. ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಅಡುಗೆ ಮನೆ ಪ್ರತ್ಯೇತವಾಗಿದೆ. ದೂರದ ಮಿತಿ ಆಧಾರದ ಮೇಲೆ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಒಬ್ಬ ವ್ಯಕ್ತಿಯ ಊಟ, ತಿಂಡಿ ಹಾಗೂ ರಾತ್ರಿ ಊಟಕ್ಕೆ ತಗುಲುವ ವೆಚ್ಚ ರೂ.55 ಆಗಿದ್ದು, ಕಾರ್ಮಿಕ ಇಲಾಖೆಯಿಂದ ನಮಗೆ ಶೇ.30 ರಷ್ಟು ಸಬ್ಸಿಡಿ ಬರುತ್ತಿರವುದರಿಂದ ಒಬ್ಬ ವ್ಯಕ್ತಿಗೆ ರೂ.25ನ್ನು ಪಡೆಯಲಾಗುತ್ತದೆ. ಊಟದ ಪಟ್ಟಿ ಕುರಿತಂತೆ ಇದೀಗ ವೆಚ್ಚಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ವೆಚ್ಚ ಹೆಚ್ಚಾಗಿದ್ದೇ ಆದರೆ, ಅನ್ನದ ಪದಾರ್ಥಗಳನ್ನು ಮಾಡಲಾಗುತ್ತದೆ. ಆದರೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ತೀರ ಪ್ರದೇಶದ ಜನರು ಅನ್ನವನ್ನು ಇಷ್ಟ ಪಡದ ಕಾರಣ ಸ್ಥಳೀಯ ಆಹಾರ ಆಯ್ಕೆಗಳಿಗೆ ಪ್ರಾಮುಖ್ಯತೆ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!