ಕೃಷಿ ಮೇಳ: 4 ದಿನಗಳಲ್ಲಿ 11 ಲಕ್ಷ ಮಂದಿ ಭೇಟಿ 
ರಾಜ್ಯ

ಕೃಷಿ ಮೇಳ: 4 ದಿನಗಳಲ್ಲಿ 11 ಲಕ್ಷ ಮಂದಿ ಭೇಟಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಕಡೆಯ ದಿನವಾಗಿದ್ದರಿಂದ ಮೇಳಕ್ಕೆ ಜನಸಾಗವೇ ಹರಿದು ಬಂದಿತ್ತು...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಕಡೆಯ ದಿನವಾಗಿದ್ದರಿಂದ ಮೇಳಕ್ಕೆ ಜನಸಾಗವೇ ಹರಿದು ಬಂದಿತ್ತು. 
ಕಳೆದ ಭಾರಿ ರಾಜ್ಯದಲ್ಲಿ ಎದುರಾಗಿದ್ದ ಭೀಕರ ಬರ ಹಿನ್ನಲೆಯಲ್ಲಿ ಕೃಷಿಮೇಳ ಆಯೋಜನೆಯಾಗಿರಲಿಲ್ಲ. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಮೇಳವನ್ನು ವ್ಯವಸ್ಥಿತಿವಾಗಿ ಆಯೋಜನೆ ಮಾಡಲಾಗಿತ್ತು. ಮೇಳದ ಆಕರ್ಷಣೆಯ ಕೇಂದ್ರವಾಗಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ಸುಮಾರು 700 ಮಳಿಗೆಗಳನ್ನು ತೆರೆಯಲಾಗಿತ್ತು. 
ಬೆಂಗಳೂರು ಸೇರಿದಂದೆ ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ನಾನಾ ಭಾಗಗಳಿಂದ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಪಶುಸಂಗೋಪನೆ, ಕೃಷಿ ಯಂತ್ರೋಪಕರಣ, ಕೃಷಿ ಪರಿಕರ, ಮೀನುಗಾರಿಕಾ, ತೋಟಗಾರಿಕೆ, ಹನಿ ನೀರಾವರಿ, ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು. 
ಕೃಷಿ ಮೇಳಕ್ಕೆ ಮೊದಲ ದಿನ 1.25 ಲಕ್ಷ, ಎರಡನೇ ದಿನ 2.50 ಲಕ್ಷ, ಮೂರನೇ ದನ 3.50 ಲಕ್ಷ ಹಾಗೂ ಕೊನೆಯ ದಿನ 5 ಲಕ್ಷ ಸೇರಿದಂತೆ ನಾಲ್ಕು ದಿನಗಳಲ್ಲಿ ಒಟ್ಟು 11 ಲಕ್ಷಕ್ಕೂ ಹೆಚ್ಚು ಮಂದಿ ಮೇಳಕ್ಕೆ ಭೇಟಿ ನೀಡುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. 
ಕಡೆಯ ದಿನವಾದ ನಿನ್ನೆ ಮೇಳ ಜನರಿಂದ ತುಂಬಿ ತುಳುಕುತ್ತಿತ್ತು. ಪ್ರತಿ ಮಳಿಗೆಯಲ್ಲಿರೂ ಜನರು ಕಿಕ್ಕಿರಿದಿದ್ದರು. ಭಾನುವಾರ ರಜೆ ಇದ್ದ ಕಾರಣ ಸಾಕಷ್ಟು ಮಂದಿ ಕುಟುಂಬ ಸಮೇತರಾಗಿ ಮೇಳದಲ್ಲಿ ಸುತ್ತಾಟ ನಡೆಸಿದ್ದರು. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳ ದೊಡ್ಡ ಸಮೂಹವೇ ಮೇಳದಲ್ಲಿ ನೆರೆದಿತ್ತು. ಸಂಜೆ 6 ಗಂಟೆಯವರೆಗೂ ಮೇಳ ಜನದಟ್ಟಣೆಯಿಂದ ಕೂಡಿತ್ತು. 
ಬರ ಹಿನ್ನಲೆಯಲ್ಲಿ ಕಳೆದ ವರ್ಷ ಕೃಷಿ ಮೇಳವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾದ್ದರಿಂದ ಮೇಳವನ್ನು ಆಯೋಜಿಸಲಾಗಿತ್ತು ಎಂದು ಹಿರಿಯ ಮಾಹಿತಿ ತಜ್ಞ ಡಾ.ಕೆ. ಶಿವರಾಮು ಅವರು ಹೇಳಿದ್ದಾರೆ. 
ನಾವಿನ್ಯತೆಯ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದರ ಜೊತೆಗೆ ಜನರದಲ್ಲಿ ಕೃಷಿ ಬಗ್ಗೆ ಜ್ಞಾನವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ. ಮೇಳದಲ್ಲಿ ರೈತರ ಜೊತೆಗೆ ಸಾಕಷ್ಟು ನಗರ ನಿವಾಸಿಗಳು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ. 
ಥಣಿಸಂದ್ರದಲ್ಲಿರುವ ಟೆಕಿ ಕಿರಣ್ ಕೆ.ಪಿ ಮಾತನಾಡಿ, ಪಶುಸಂಗೋಪನೆ ವಿಭಾಗದಲ್ಲಿಯೇ ಸಾಕಷ್ಟು ಸಮಯ ಕಳೆದೆವು. ನನ್ನ ಮಕ್ಕಳು ಕುರಿ ಹಾಗೂ ಮೊಲಗಳನ್ನು ಬಹಳ ಇಷ್ಟಪಡುತ್ತಾರೆ. ಹೀಗಾಗಿ ಪಶುಸಂಗೋಪನೆ ವಿಭಾಗದಲ್ಲಿಯೇ ಹೆಚ್ಚು ಕಾಲ ಕಳೆದೆವು ಎಂದು ಹೇಳಿದ್ದಾರೆ. 
ಪಶುಸಂಗೋಪನೆ ವಿಭಾಗ ಸಾಕಷ್ಟು ಮಾಹಿತಿಗಳನ್ನು ನೀಡತು. ವಿವಿಧ ರೀತಿಯ ಬೀಜಗಳ ಕುರಿತಂತೆ ನಮಗೆ ಸಾಕಷ್ಟು ಮಾಹಿತಿ ದೊರಕಿತು ಎಂದು ಹೇಳಿದ್ದಾರೆ. 
ಕೃಷಿಗೆ ಬಳಸುವ ಸಾಧನೆಗಳು ಹೊಸತನದ್ದಾಗಿದ್ದವು. ಕೃಷಿಮೇಳದಲ್ಲಿ ಧಾನ್ಯಗಳ ಮೇಳ ಪ್ರಮುಖ ಆಕರ್ಷಣೆಯಾಗಿತ್ತು. ಸಾಂಪ್ರದಾಯಿಕ ಆಹಾರವಾಗಿರುವ ರಾಗಿಯಲ್ಲಿ ಅನೇಕ ಪೌಷ್ಟಿಕಾಂಶಗಳ ಗುಣಗಳನ್ನು ಹೊಂದಿದೆ ಎಂಬ ಸತ್ಯ ಆಕರ್ಷಣೆಯಾಗಿತ್ತು ಎಂದು ಪದವಿ ವಿದ್ಯಾರ್ಥಿ ಚೇತನ್ ಎಂಬುವವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ