ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅವರ ಮನೆ ಹಾಗೂ ಕಚೇರಿಗ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯೊಂದು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ ಪಕ್ಷಗಳ ವಿರುದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ಒಂದು ಅಸ್ತ್ರದಂತೆ ಬಳಕೆ ಮಾಡುತ್ತಿದೆ. ಐಟಿ ಅಧಿಕಾರಿಗಳೇಕೆ ಬಿ.ಎಸ್. ಯಡಿಯೂರಪ್ಪ, ಶೋಭ ಕರಾಂದ್ಲಾಜೆ ಅಥವಾ ಜಗದೀಶ್ ಶೆಟ್ಟರ್ ರಂತಹ ಬಿಜೆಪಿ ನಾಯಕರ ಮನೆಗಳ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಐಟಿ ದಾಳಿ ವಿರುದ್ಧ ನಾನಿಲ್ಲ. ಆದರೆ, ಕಾಂಗ್ರೆಸ್ ನಾಯಕರನ್ನಷ್ಟೇ ಗುರಿ ಮಾಡಬಾರದು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿಯಾಗುವ ಸಂಭವವಿದೆ ಎಂಬ ವರದಿಗಳಿಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವಲು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸರ್ಕಾರದ ಸೇವೆಯಲ್ಲಿರುವವರು. ಅವರನ್ನು ಸಿದ್ದರಾಮಯ್ಯ ಅಥವಾ ಮುಖ್ಯಮಂತ್ರಿಗಳ ಆಪ್ತರೆಂದು ವರ್ಗೀಕರಿಸಬಾರದು ಎಂದು ತಿಳಿಸಿದ್ದಾರೆ.