ಮೊನ್ನೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮೈಸೂರಿನ ಅರಮನೆ ದೀಪಾಲಂಕಾರದಿಂದ ಝಗಮಗಿಸಿತು. 
ರಾಜ್ಯ

ಮೈಸೂರು: ದಸರಾ ಸಂಭ್ರಮಕ್ಕೆ ವ್ಯಾಪಕ ಮಳೆ ಅಡ್ಡಿ

ಮೈಸೂರು ಜಿಲ್ಲೆಯ ಸುತ್ತಮುತ್ತಲ ಭಾಗಗಳಲ್ಲಿ ಧಾರಾಕಾರ ಮಳೆ ಜನತೆಯಲ್ಲಿ...

ಮೈಸೂರು: ಜಿಲ್ಲೆಯ ಸುತ್ತಮುತ್ತ ಸುರಿದ ಧಾರಾಕಾರ ಮಳೆ ಜನತೆಯಲ್ಲಿ ದಸರಾ ಹಬ್ಬದ ಉತ್ಸಾಹವನ್ನು ಕುಗ್ಗಿಸಿದೆ. ಮೈಸೂರು ನಗರದಲ್ಲಿ ಸುರಿದ ತೀವ್ರ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರು ಗಾಯಗೊಂಡಿದ್ದಾರೆ.
ಸಲೀಂ ನಗರ ಪ್ರದೇಶದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಲಾದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸುಮಾರು 30 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚಾಮುಂಡಿ ಬೆಟ್ಟದ ಕೆಳಗೆ ಜೆ.ಪಿ.ನಗರ, ಕನಕಗಿರಿ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸುತ್ತಮುತ್ತ ಮಳೆ ನೀರು ತುಂಬಿಕೊಂಡಿರುವುದರಿಂದ ಶ್ರೀರಾಮ್ ಪುರದಲ್ಲಿ ಜನರು ಮಳೆಯಲ್ಲಿ ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗೆ ಸಂಚರಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ.
ದಸರಾ ಹಬ್ಬದ ಸಂಭ್ರಮ, ಸಡಗರದಲ್ಲಿರುವ ಮೈಸೂರು ನಗರ ಭಾಗದಲ್ಲಿ ನಿನ್ನೆ ಸಾಯಂಕಾಲ 6 ಗಂಟೆಯಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಿದೆ. ದಸರಾ ಪ್ರಯುಕ್ತ ನಿಗದಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಿದೆ. ಮೈಸೂರಿನ ಕೇಂದ್ರ ಭಾಗದಲ್ಲಿ ವಿದ್ಯುತ್ ಪ್ರಸಾರ ಸ್ಥಗಿತಗೊಂಡಿದೆ. ಹೀಗಾಗಿ ಪ್ರತಿವರ್ಷ ದಸರಾ ಸಮಯದಲ್ಲಿ ದೀಪಗಳಿಂದ ಕಂಗೊಳಿಸುವ ನ್ಯೂ ಸತ್ಯಜಿತ್ ರಾವ್ ರಸ್ತೆಯಲ್ಲಿ ಈ ಬಾರಿ ಕತ್ತಲು ಆವರಿಸಿದೆ. ಇಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪೂರೈಕೆ ನಿಗಮದಿಂದ ವಿದ್ಯುತ್ ಪೂರೈಕೆಯಾಗಿಲ್ಲ.
ಚಾಮುಂಡಿ ಬೆಟ್ಟದ ಎತ್ತರದಲ್ಲಿರುವ ತಾವರೆಕೆರೆ ಮತ್ತು ಹೂಟಗಳ್ಳಿಯ ಕೆರೆ ಕಟ್ಟೆಗಳು ನೀರು ತುಂಬಿ ನಗರದ ಹೊರವಲಯದಲ್ಲಿರುವ ಭೂಮಿ ನೀರಿನಿಂದ ಮುಳುಗಡೆಯಾಗಿದೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಹಲವು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್