ಬೆಂಗಳೂರು: ಗಂಡು ಮಗು ಹೆತ್ತು ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ದಿನನಿತ್ಯ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ 27 ವರ್ಷದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ವೀಣಾ ಮೃತ ಮಹಿಳೆ. ಪ್ರಕರಣ ಸಂಬಂಧ ಪೊಲೀಸರು ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಳಕೆಯಾಗಿರುವ ಕಾರುಳನ್ನು ಮಾರಾಟ ಮಾಡುವ ಶಶಿಕುಮಾರ್ ಮತ್ತು ವೀಣಾ ಅವರ ವಿವಾಹವಾಗಿ 7 ವರ್ಷವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮಾರ್ಚ್ 28 ರಂದು ರಾತ್ರಿ ಊಟವಾದ ನಂತರ ದಂಪತಿ ನಡುವೆ ಗಂಡುಮಗುವಿಗೆ ಸಂಬಂಧಿಸಿದಂತೆ ಜಗಳವಾಯಿತು, ಇಬ್ಬರು ಹೆಣ್ಣು ಮಕ್ಕಳ ನಡುವೆ ವೀಣಾ ಕೆನ್ನೆಗೆ ಶಿವಕುಮಾರ್ ಹೊಡೆದಿದ್ದನು. ಶಿವಕುಮಾರ್ ಮನೆಯಿಂದ ಹೊರಹೋದ ನಂತರ ನೊಂದ ವೀಣಾ ತಮ್ಮ ಇಬ್ಬರು ಹೆಣ್ಣು ಮಕ್ಕಳ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಕೂಡಲೇ ಇಬ್ಬರು ಹೆಣ್ಣು ಮಕ್ಕಳು ನೆರೆಹೊರೆಯವರನ್ನು ಸಹಾಯಕ್ಕೆ ಕರೆದಿದ್ದಾರೆ, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಷ್ಟರಲ್ಲಾಗಲೇ ವೀಣಾ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಆದರೆ ಶಶಿಕುಮಾರ್ ತನ್ನ ಮಗಳಿಗೆ ಬೆಂಕಿ ಹಚ್ಚಿ ಮನೆಯಿಂದ ಓಡಿಹೋಗಿದ್ದಾನೆ ಎಂದು ವೀಣಾ ಪೋಷಕರು ಆರೋಪಿಸಿದ್ದಾರೆ, ಇನ್ನೂ ಪೊಲೀಸರು ಪ್ರತ್ಯಕ್ಷ ಸಾಕ್ಷಿಗಳಾದ ಮಕ್ಕಳ ಹೇಳಿಕೆ ಪಡೆದುಕೊಂಡಿದ್ದಾರೆ.