ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಭಾರೀ ಮಳೆಗೆ ಸೇತುವೆ ನಾಶ: ಪ್ರಾಣ ಹಿಡಿದು ಶಾಲೆಯಲ್ಲಿಯೇ 2 ರಾತ್ರಿ ಕಳೆದ ಮಕ್ಕಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಕೊಂಡಿಯಂತಿದ್ದ ಸೇತುವೆಯೊಂದು ನಾಶಗೊಂಡ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಹಿಡಿದು 2 ರಾತ್ರಿ ಶಾಲೆಯಲ್ಲಿಯೇ...

ಭಾರೀ ಮಳೆಗೆ ಸೇತುವೆ ನಾಶ: ಪ್ರಾಣ ಹಿಡಿದು ಶಾಲೆಯಲ್ಲಿಯೇ 2 ರಾತ್ರಿ ಕಳೆದ ಮಕ್ಕಳು
Manjula VN
Updated On : 19 Aug 2018, 10:26 am
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಕೊಂಡಿಯಂತಿದ್ದ ಸೇತುವೆಯೊಂದು ನಾಶಗೊಂಡ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಹಿಡಿದು 2 ರಾತ್ರಿ ಶಾಲೆಯಲ್ಲಿಯೇ ಕಳೆದ ಘಟನೆ ಉತ್ತರ ಕನ್ನಡ ಜಿಲ್ಲೆ ಜೊಯ್ಡಾ ತಾಲೂಕಿನ ತಿಂಬೋಳಿ ಗ್ರಾಮದಲ್ಲಿ ನಡೆದಿದೆ. 
ಉತ್ತರ ಕನ್ನಡ ಜಿಲ್ಲೆ ಜೊಯ್ಡಾ ತಾಲೂಕಿನ ತಿಂಬೋಳಿ ಗ್ರಾಮದಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಸೇವೆ ಸಂಪೂರ್ಣವಾಗಿ ನಾಶಗೊಂಡಿದೆ. 
ಎಂದಿನಂತೆ ಮಕ್ಕಳು ಗುರುವಾರ ಬೆಳಿಗ್ಗೆ ಶಾಲೆಗೆ ಹೋಗಿದ್ದಾರೆ. ಆದರೆ, ಶಾಲೆ ಮುಗಿಸಿ ಮನೆಗೆ ತೆರಳು ಸೇತುವೆ ಬಳಿ ಬಂದಾಗ ಸೇತುವೆ ನಾಶಗೊಂಡಿರುವುದು ತಿಳಿದಿದೆ. ಇದರಿಂದ ಭೀತಿಗೊಳಗಾದ ಮಕ್ಕಳು ಗ್ರಾಮಕ್ಕೆ ತೆರಳಲಾಗದೆ ಶಾಲೆಯಲ್ಲಿಯೇ 2 ದಿನಗಳು ಕಳೆದಿದ್ದಾರೆ. 

Advertisement

Advertisement

ಪಟಿವಾಡಾ ಮತ್ತು ತೆರೆಗಾರಿ ಗ್ರಾಮಗಳಲ್ಲಿನ ಮಕ್ಕಳು ತಿಂಬೋಳಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಶಾಲೆಗೆ ಹಗಲು ಪ್ರಸ್ತುತ ನಾಶಗೊಂಡಿರುವ ಸೇತುವೆಯನ್ನು ಬಳಕೆ ಮಾಡುತ್ತಿದ್ದರು. ಆದರೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ಸೇತುವೆ ನಾಶಗೊಂಡಿದೆ. ಇದರಿಂದ ಮಕ್ಕಳು ತಮ್ಮ ಮನೆಗಳಿಗೆ ತೆರಳು ಸಾಧ್ಯವಾಗದೆ, ಯಾವುದೇ ದಾರಿಗಳಿಲ್ಲದೆ ಶಾಲೆಯಲ್ಲಿಯೇ 2 ರಾತ್ರಿ ಕಾಲ ಕಳೆದಿದ್ದಾರೆ. 
ಬಳಿಕ ತಿಂಬಳಿ ಗ್ರಾಮಸ್ಥರು ಮಕ್ಕಳು ಶಾಲೆಯಲ್ಲಿಯೇ ಉಳಿಯಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದ್ದಾರೆ. ಶನಿವಾರ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರ ಸಹಾಯಕೊಂದಿದೆ ಮಕ್ಕಳು ಮನೆಗಳಿಗೆ ತೆರಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement