ರಾಜ್ಯ

ಮೀನುಗಾರಿಕಾ ಸಂಸ್ಕರಣ ಘಟಕಗಳ ಮೇಲೆ ಐಟಿ ರೇಡ್: ಕೋಟ್ಯಾಂತರ ಆಸ್ತಿ ಪತ್ತೆ

Vishwanath S
ಉಡುಪಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಂಗಳೂರು, ಉಡುಪಿ, ಮಂಗಳೂರು, ಹುಬ್ಬಳ್ಳಿ ಮತ್ತು ಗೋವಾ ಸೇರಿದಂತೆ ವಿವಿಧ ಮೀನುಗಾರಿಕಾ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿ ಸುಮಾರು 185 ಕೋಟಿಗೂ ಅಧಿಕ ಮೊತ್ತದ ಅಘೋಷಿತ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಖಾಸಗಿ ಟಿವಿ ಚಾನೆಲ್ ವರದಿ ತಿಳಿದೆ. 
ಸುಮಾರು 150ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ಸಾಲ ತೋರಿಸಿ ತೆರಿಗೆ ವಂಚಿಸಿದ್ದ ಮೀನು ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ. 
ಫೆಬ್ರವರಿ 8 ರಿಂದ 4 ದಿನಗಳ ಕಾಲ ಐಟಿ ಅಧಿಕಾರಿಗಳು ಮಂಗಳೂರು, ಉಡುಪಿ, ಬೆಂಗಳೂರು, ಹುಬ್ಬಳ್ಳಿ ಹಾಗೂ ಗೋವಾ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು. 
ಮತ್ಸೋಧ್ಯಮಿಗಳು, ಮಧ್ಯವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದೃಷ್ಟಿ ನೆಟ್ಟಿದ್ದು ಬೇನಾಮಿ ಹೆಸರಿನಲ್ಲಿ ಮೀನುಗಾರಿಕೆ ವಹಿವಾಟು ನಡೆಸುತ್ತಿರುವುದನ್ನು ಪತ್ತೆ ಹಚ್ಚಲು ಮುಂದಾಗಿದೆ. 
SCROLL FOR NEXT