ಬೆಂಗಳೂರು: ಮಿಸ್ ಇಂಡಿಯಾ ಸೌತ್ 2018 ವಿಜೇತರನ್ನು (ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣ) 24 ಮಾರ್ಚ್ 2018 ರಂದು ನಗರದ ಹೋಟೆಲ್ ದಿ ಒಟೆರ್ರಾದಲ್ಲಿ ಘೋಷಿಸಲಾಯಿತು.
ಈ ವಿಜೇತರು ಮಿಸ್ ಇಂಡಿಯಾ 2018 ನ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಪ್ರವೇಶವನ್ನು ಪಡೆಯುವ ಒಂದು ಅವಕಾಶವನ್ನು ಪಡೆಯುತ್ತಾರೆ, ಈ ಗ್ರ್ಯಾಂಡ್ ಫಿನಾಲೆಯು ಜೂನ್ ತಿಂಗಳಿನಲ್ಲಿ ಮುಂಬೈನಲ್ಲಿ ನಡೆಯಲಿದೆ.
ರಾಕುಲ್ ಪ್ರೀತ್ ಸಿಂಗ್, ರಾಯ್ ಲಕ್ಷ್ಮಿ, ಪಂಕಜ್ ಅಡ್ವಾಣಿ, ಬೆಹ್ರಾಮ್ ಸಿಗಾನ್ಪೋರ್ರಿಯಾ ಮತ್ತು ವಿಜಯ್ ಸೂರ್ಯ ಈ ಮಿಸ್ ಇಂಡಿಯಾ ಸೌತ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ವಿಜೇತರ ಹೆಸರು:
ಭಾವನಾ ದುರ್ಗಂ (ಕರ್ನಾಟಕ)
ಶ್ರೇಯಾ ರಾವ್ ಕಮವರಪು (ಆಂಧ್ರ ಪ್ರದೇಶ)
ಕಾಮಾಕ್ಷಿ ಭಾಸ್ಕರಾಲ (ತೆಲಂಗಾಣ)
ಮೇಖನಾ ಶಾಜನ್ (ಕೇರಳ)
ಅನುಕ್ರೀತಿ ವಸ್ (ತಮಿಳುನಾಡು)