ರಾಜ್ಯ

ಆಧಾರ್ ಮೂಲಕ 8.5 ಲಕ್ಷ ನಕಲಿ ರೇಷನ್ ಕಾರ್ಡ್ ರದ್ದು: ಯುಟಿ ಖಾದರ್

Lingaraj Badiger
ಬೆಂಗಳೂರು: ಆಧಾರ್ ಮೂಲಕ ರಾಜ್ಯದಲ್ಲಿ ಒಟ್ಟು 8.5 ಲಕ್ಷ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರು ಬುಧವಾರ ಹೇಳಿದ್ದಾರೆ.
ಪ್ರತಿ ನ್ಯಾಯ ಬೆಲೆ ಅಂಗಡಿಯಲ್ಲಿ 60ರಿಂದ 70 ನಕಲಿ ಪಡಿತರ ಚೀಟಿಗಳಿದ್ದು, ಅವುಗಳನ್ನು ಆಧಾರ್ ಮೂಲಕ ಪತ್ತೆ ಹಚ್ಚಿ ಸಿಸ್ಟಮ್ ನಿಂದ ತೆಗೆದು ಹಾಕಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.
ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಮಷಿನ್ ಗಳನ್ನು ಒದಗಿಸಲಾಗುತ್ತಿದ್ದು, ಅದರ ಮೂಲಕ ನಿಜವಾದ ಫಲಾನುಭವಿಯನ್ನು ಪತ್ತೆಹಚ್ಚು ಸಾಧ್ಯವಾಗುತ್ತಿದೆ. ಈಗಾಗಲೇ ಶೇ.80ರಷ್ಟು ನ್ಯಾಯ ಬೆಲೆ ಅಂಗಡಿಯಲ್ಲಿ ಪಿಒಎಸ್ ಇದೆ ಎಂದರು.
ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 20,335 ನ್ಯಾಯ ಬೆಲೆ ಅಂಗಡಿಗಳ ಪೈಕಿ 16,832 ನ್ಯಾಯ ಬೆಲೆ ಅಂಗಡಿಗಳಿಗೆ ಪಿಒಎಸ್ ಒದಗಿಸಲಾಗಿದೆ. ಉಳಿದ ಅಂಗಡಿಗಳಿಗೆ ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಈ ಬಯೋಮೆಟ್ರಿಕ್ ಪಿಒಎಸ್ ಗಳಿಗೆ ಇಂಟರ್ ಸಂಪರ್ಕದ ಸಮಸ್ಯೆ ಇದೆ ಎಂಬ ದೂರುಗಳಿದ್ದು, ಅದನ್ನು ಈ ವರ್ಷದಲ್ಲೇ ಪರಿಹರಿಸಲಾಗುವುದು ಎಂದಿದ್ದಾರೆ.
SCROLL FOR NEXT