ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕಲಬುರ್ಗಿ: ತಡರಾತ್ರಿ ಪೋಲೀಸ್ ಕಾರ್ಯಾಚರಣೆ, ಫೈರಿಂಗ್ ನಡೆಸಿ ಕುಖ್ಯಾತ ರೌಡಿಯ ಬಂಧನ

ಕುಖ್ಯಾತ ರೌಡಿ ಶೀಟರ್‌ ಮೇಲೆ ಬುಧವಾರ ತಡರಾತ್ರಿ ಕಲಬುರ್ಗಿ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
Raghavendra Adiga
Updated On : 10 Jan 2018, 11:28 am
ಕಲಬುರ್ಗಿ: ಕುಖ್ಯಾತ ರೌಡಿ ಶೀಟರ್‌ ಮೇಲೆ ಬುಧವಾರ ತಡರಾತ್ರಿ ಕಲಬುರ್ಗಿ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ನಡೆದಿದೆ. 
ರೌಡಿ ಶೀಟರ್‌ ಇದ್ದಿಲು ಮಲ್ಲು ಮೇಲೆ ಪೋಲೀಸರು ಗುಂಡು ಹಾರಿಸಿದ್ದು ಕಲಬುರ್ಗಿ ನಗರದ ಹೊರವಲಯದಲ್ಲಿರುವ  ಕೆಸರಟಗಿ ಗಾರ್ಡನ್ ಸಮೀಪ ಈ ಘಟನೆ ಸಂಭವಿಸಿಸಿದೆ. 
ಒಂಭತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೋಲೀಸ್ರೈಗೆ ಬೇಕಾಗಿದ್ದ ಈತನನ್ನು ಬಂಧಿಸಲು ಪೋಲೀಸರು ಭಾರೀ ಸಾಹಸ ನಡೆಸಿದ್ದಾರೆ. ನಿನ್ನೆ ಆತ ಕಲಬುರ್ಗಿಯ ಹೊರವಲಯದಲ್ಲಿದ್ದ ನಿಖರ ಮಾಹಿತಿ ಪಡೆದ ಪೋಲೀಸರು ಆತನನ್ನು ಬಂಧಿಸಲು ತೆರಳಿದ್ದಾರೆ. ಆಗ ಆತ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೋಲೀಸರು ಫೈರಿಂಗ್ ನಡೆಸಿದರೆಂದು ಹೇಳಲಾಗಿದೆ.

Advertisement

Advertisement

ಗುಂಡೇಟು ತಿಂದ ರೌಡಿಯನ್ನು ಪೋಲೀಸರು ಬಂಧಿಸಿದ್ದು ಪ್ರಕರಣದಲ್ಲಿ ಮೂವರು ಪೋಲೀಸರು ಸಹ ಗಾಯಗೊಂಡಿದ್ದಾರೆ. ಬಂಧಿತ ರೌಡಿ ಇದ್ದಿಲು ಮಲ್ಲು ಇತ್ತೀಚೆಗೆ ಎನ್ ಕಂಟರ್ ಗೆ ಬಲಿಯಾಗಿದ್ದ  ಕರಿ ಚಿರತೆ ಅಲಿಯಾಸ್ ಮಲ್ಲಿಕಾರ್ಜುನನ ಸಹಚರನಾಗಿದ್ದ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement