ಬೆಂಗಳೂರು; ಕುಸಿದು ಬಿದ್ದ ಗೋಡೆ, ಓರ್ವ ವ್ಯಕ್ತಿ ಸಾವು, 3 ಗಾಯ 
ರಾಜ್ಯ

ಬೆಂಗಳೂರು; ಕುಸಿದು ಬಿದ್ದ ಗೋಡೆ, ಓರ್ವ ವ್ಯಕ್ತಿ ಸಾವು, 3 ಗಾಯ

ನಗರದಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಬಸವನಗುಡಿಯಲ್ಲಿರುವ ಮನೆಯ ಗೋಡೆಯೊಂದು ಕುಸಿದುಬಿದ್ದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ...

ಬೆಂಗಳೂರು: ನಗರದಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಬಸವನಗುಡಿಯಲ್ಲಿರುವ ಮನೆಯ ಗೋಡೆಯೊಂದು ಕುಸಿದುಬಿದ್ದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 
ಮೃತ ವ್ಯಕ್ತಿಯನ್ನು ಮಹಾಂತೇಶ್ ಎಂದು ಗುರ್ತಿಸಲಾಗಿದೆ. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ನಿವಾಸಿಯಾಗಿದ್ದ ಮಹಾಂತೇಶ್ ಅವರು ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಐಟಿಐ ಲೇಔಟ್'ನಲ್ಲಿದ್ದ ಶೆಡ್ ವೊಂದರಲ್ಲಿ ವಾಸವಿದ್ದ ಅವರು ಕಟ್ಟಡ ನಿರ್ಮಾಣ ಕೆಲಸಗಳನ್ನು ಮಾಡಿಕೊಂಡಿದ್ದರು. 
ತಡರಾತ್ರಿ 1.45 ಸುಮಾರಿಗೆ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡವೊಂದು ಶೆಟ್ ಮೇಲೆ ಕುಸಿದು ಬಿದ್ದಿದೆ. ಶೆಟ್ ನಲ್ಲಿ 5 ಮಂದಿ ವಾಸವಿದ್ದರು. ಗೋಡೆ ಕುಸಿದು ಬಿದ್ದ ಪರಿಣಾಮ ಮಹಾಂತೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಾಂತೇಶ್ ಪತ್ನಿ ಪಾರ್ವತಿ (22), ಶರಣಪ್ಪ (34), ಶೋಭಾ (27) ಅವಶೇಷಗಳಿ ಸಿಲುಕಿದ್ದರು. ಬಳಿಕ ಅಗ್ನಿ ಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಗಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಊಟ ಮಾಡಿದ ಬಳಿಕ ಶೆಡ್ ನಲ್ಲಿಯೇ ಎಲ್ಲರೂ ಮಲಗಿದ್ದೆವು. ಕಟ್ಟಡದ ಬಳಿ ನೀರು ಸೋರುತ್ತಿತ್ತು. ಮಧ್ಯರಾತ್ರಿ ಇದ್ದಕ್ಕಿದ್ದಂತೆಯೇ ಗೋಡೆ ಕುಸಿದುಬಿದ್ದಿತ್ತು. ಕೂಡಲೇ ಶೆಟ್ ನಲ್ಲಿ ಚಾರ್ಜ್ ಗೆ ಹಾಕಲಾಗಿದ್ದ ಮೊಬೈಲ್ ತೆಗೆದುಕೊಂಡು ಹೊರಗೆ ಓಡಿ ಹೋದೆ. ಬಳಿಕ ರಕ್ಷಣೆಗಾಗಿ ಕೂಗಲು ಆರಂಭಿಸಿದ್ದೆ. ಸ್ಥಳೀಯರು ರಕ್ಷಣೆಗೆ ಧಾವಿಸಿದರು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೆಲ ವರ್ಷಗಳ ಹಿಂದಷ್ಟೇ ನನ್ನ ಸಹೋದರಿ ಪಾರ್ವತಿ ಮಹಾಂತೇಶ್ ನನ್ನು ಮದುವೆಯಾಗಿದ್ದರು. ಕೆಲಸಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದೆವು ಎಂದು ಗಾಯಾಳು ಪಾರ್ವತಿ ಸಹೋದರ ಗೌತಮ್ ಹೇಳಿದ್ದಾರೆ. 
ನಿರ್ಮಾಣ ಹಂತದ ಕಟ್ಟದ ಚಿಟ್ಟಿ ಬಾಬು ಎಂಬುವವರಿಗೆ ಸಂಬಂಧಿಸಿದ್ದಾಗಿದೆ. ಶೆಡ್'ನ್ನು ಮಹೇಶ್ ಬಾಬು ಎಂಬುವವರು ನಿರ್ಮಿಸಿದ್ದು, ಜೀವನ ನಡೆಯಲು ಯೋಗ್ಯವಾದ ಶೆಟ್ ಆಗಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಚ್ಚುಕಟ್ಟು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ