ಸಂಗ್ರಹ ಚಿತ್ರ 
ರಾಜ್ಯ

ಸಂಕಷ್ಟಗಳಿದ್ದರೂ ಕಾನೂನು ಉಲ್ಲಂಘನೆ ಮಾಡಿಲ್ಲ, ಇದು ನಮ್ಮ ದೌರ್ಬಲ್ಯವೆಂದು ತಿಳಿಯಬೇಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ತೀವ್ರವಾಗಿ...

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ತೀವ್ರವಾಗಿ ಕಿಡಿಕಾರಿದೆ. 
ರಾಜ್ಯ ಸರ್ಕಾರದ ನಿಲುವನ್ನು ಪತ್ರದ ಮೂಲಕ ತಿಳಿಸಲು ಮುಂದಾಗಿರುವ ಕುಮಾರಸ್ವಾಮಿಯವರು, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧೀಕರಣದ ಆದೇಶಗಳ ಅನ್ವಯ ಸಮರ್ಪಕವಾಗಿ ನೀರು ಬಿಡುಗಡೆ ಮಾಡುತ್ತಿದೆ. ನೀರು ಲಭ್ಯತೆಯಿದ್ದಾಗಲೆಲ್ಲಾ ನ್ಯಾಯಯುತವಾಗಿ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಬಿಡುಗಡೆಯಾಗಬೇಕಿರುವ ನೀರು ಬಿಡುಗಡೆ ಮಾಡಿದ್ದೇವೆ. 
ಆದಾಗ್ಯೂ ಪ್ರಾಧಿಕಾರ ರಚನೆಯಿಂದಾಗಿ ನೀಲು ಲಭ್ಯವಿಲ್ಲದಿದ್ದಗಲೂ ಬಿಡುಗಡೆ ಮಾಡುವಂತೆ ಒತ್ತಾಯ ಹೇರಬಹುದಾದ ಸಾಧ್ಯತೆಗಳಿವೆ. ಹೀಗಾಗಿ ಪ್ರಾಧಿಕಾರ ರಚನೆ ವಿಚಾರವನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ. 
ಇದರ ಜೊತೆಗೆ, ಈ ವಿಚಾರವಾಗಿ ಗಂಭೀರವಾಗಿ ಚರ್ಚೆ ನಡೆಯಬೇಕಾಗಿದೆ. ಹೀಗಾಗಿ ಲೋಕಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ನೀಡಲೇಬೇಕು ಎಂಬುದು ಕರ್ನಾಟಕ ರಾಜ್ಯದ ನಿಲುವು ಎಂದು ಪತ್ರದ ಮೂಲಕ ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ. 
ರಾಜ್ಯದಿಂದ ಕೆಲವೊಂದು ಸಲಹೆಗಳನ್ನು ನೀಡಲಾಗಿತ್ತು. ಆ ಚರ್ಚೆ ಚರ್ಚಿಸಬೇಕು ಎಂದು ಪ್ರಧಾನಿ ಮೋದಿಯವರ ಬಳಿ ಮನವಿ ಮಾಡಲಾಗಿತ್ತು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ. 
ರಾಜ್ಯವನ್ನು ಹೊರತುಪಡಿಸಿ, ಪ್ರಾಧಿಕಾರಿ ರಚನೆ ಮಾಡಿರುವ ವಿಷಯ ತಿಳಿದ ಕೂಡಲೇ ನೀರಾವರಿ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಪ್ರಾಧಿಕಾರ ರಚನೆ ಕುರಿತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರನ್ನು ಸಂಪರ್ಕಿಸಿ ಚರ್ಚಿಸಲಾಗಿದೆ. 15 ದಿನದೊಳಗೆ ತಮ್ಮನ್ನು ಭೇಟಿಗೆ ಅವಕಾಶ ಮಾಡಿಕೊಡುವ ಆಶ್ವಾಸನೆಯನ್ನು ಗಡ್ಕರಿಯವರು ನೀಡಿದ್ದಾರೆಂದು ತಿಳಿಸಿದ್ದಾರೆ. 
ಜನರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿಲ್ಲ, ಇದನ್ನೇ ನಮ್ಮ ದುರ್ಬಲವೆಂದು ತಿಳಿಯಬಾರದು ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಗ್ನಿಪರೀಕ್ಷೆಯಲ್ಲಿ ಸೋತ NDA: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸೋಲು!

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

'ಶ್ರೀಕೃಷ್ಣನ ಮುಂದೆ ಕೋಳಿ ಮಾಂಸ': ಕೇರಳದ ರೆಸ್ಟೋರೆಂಟ್ ಮಾಲೀಕನ ಬಂಧನ

ಮಧ್ಯ ಪ್ರಾಚ್ಯ ಸಂಘರ್ಷ: Indian Stock market ಉತ್ತಮ ವಹಿವಾಟು, ಸೆನ್ಸೆಕ್ಸ್ 504 ಅಂಕ ಏರಿಕೆ, 5 ಲಕ್ಷ ಕೋಟಿ ಲಾಭ

'ನಾನೇನು ಭಯೋತ್ಪಾದಕನಾ?': ಕಾಂಗ್ರೆಸ್ ನಾಯಕ Pawan Khera ಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆ, 'ಸುಪ್ರೀಂ' ನಕಾರಾ

SCROLL FOR NEXT