ಸಿದ್ದಾಪುರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳು 
ರಾಜ್ಯ

ಬೆಂಗಳೂರು: 100 ವರ್ಷ ಹಳೇಯ ಸರ್ಕಾರಿ ಶಾಲೆ ಮುಚ್ಚುವ ಭೀತಿ, ಆತಂಕದಲ್ಲಿ ವಿದ್ಯಾರ್ಥಿಗಳು

ಶತಮಾನಗಳಷ್ಟು ಇತಿಹಾಸ ಹೊಂದಿರುವ ಹಳೆಯ ಪ್ರಾಥಮಿಕ ಶಾಲೆಗಳನ್ನು ಧ್ವಂಸಗೊಳಿಸಲು ಸರ್ಕಾರ ಮುಂದಾಗಿದ್ದು, ವಿದ್ಯಾರ್ಥಿಗಳನ್ನು ಭೀತಿಗೊಳಿಸಿದೆ.

ಬೆಂಗಳೂರು : ಶತಮಾನಗಳಷ್ಟು ಇತಿಹಾಸ ಹೊಂದಿರುವ ಹಳೆಯ  ಪ್ರಾಥಮಿಕ ಶಾಲೆಗಳನ್ನು ಧ್ವಂಸಗೊಳಿಸಲು ಸರ್ಕಾರ ಮುಂದಾಗಿದ್ದು, ವಿದ್ಯಾರ್ಥಿಗಳನ್ನು ಭೀತಿಗೊಳಿಸಿದೆ.

 ಶತಮಾನಗಳಷ್ಟು  ಇತಿಹಾಸ ಹೊಂದಿರುವ ಹಳೆಯ ಶಾಲೆಗಳನ್ನು ಪರಂಪರಿಕ ಶಾಲೆಗಳನ್ನಾಗಿ ಮೇಲ್ದರ್ಜೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದರು.

 ಆದರೆ,  147 ವರ್ಷ ಹಳೆಯದಾದ ಬೆಂಗಳೂರಿನ  ಸಿದ್ದಾಪುರದಲ್ಲಿ ಪ್ರಾಥಮಿಕ ಶಾಲೆಯನ್ನು ಧ್ವಂಸಗೊಳಿಸಲಾಗುತ್ತಿದ್ದು, ಇಲ್ಲಿನ 60 ವಿದ್ಯಾರ್ಥಿಗಳು ಬೀದಿಗೆ ಬಿದ್ದಂತಾಗಿದೆ.

 ಈ ಶಾಲೆಯನ್ನು ಧ್ವಂಸಗೊಳಿಸಿ ಅಂಬೇಡ್ಕರ್ ಭವನ ಹಾಗೂ ಪ್ರೋಫೆಸರ್ ಬಿ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಶಾಸಕ ಆರ್. ವಿ. ದೇವರಾಜ್ ಮನವಿ ಮೇರಿಗೆ  ಸಮಾಜ ಕಲ್ಯಾಣ ಸಚಿವರು  ಈ ನಿರ್ಧಾರ ಕೈಗೊಂಡಿದ್ದಾರೆ.

ಈ  ಸಂಬಂಧ ನಡೆದ ಸಭೆಯಲ್ಲಿನ ಕೈಗೊಂಡ ತೀರ್ಮಾನದ ಪ್ರತಿ ದಿ ನ್ಯೂ ಇಂಡಿಯನ್  ಎಕ್ಸ್ ಪ್ರೆಸ್ ಗೆ ದೊರೆಕಿವೆ. 1919ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು,  1 ರಿಂದ 7 ನೇ ತರಗತಿಯಲ್ಲಿ ಸುಮಾರು 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸ್ವಯ ಸೇವಾ ಸಂಸ್ಥೆಗಳು ರಕ್ಷಿಸಿದ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಶಾಲೆಯಲ್ಲಿ 15 ಕೊಠಡಿಗಳಿವೆ .ಇಂತಹ ಮಕ್ಕಳಿಗೆ ಕೆಲ ಕೊಠಡಿಗಳನ್ನ ಬಿಟ್ಟುಕೊಡಲಾಗಿದೆ. ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಬೆಳಗ್ಗೆ ಹಾಗೂ ರಾತ್ರಿ ಸ್ವಯಂ ಸೇವಾ ಸಂಸ್ಥೆಯಿಂದ ಆಹಾರ ಒದಗಿಸಲಾಗುತ್ತದೆ ಎಂದು ಶಾಲೆಯ ಉಪಾಧ್ಯಾಯರು ತಿಳಿಸಿದ್ದಾರೆ.

 100 ವರ್ಷ ಹಳೆಯೇದಾದ ಈ ಶಾಲೆ ಧ್ವಂಸಗೊಳಿಸುವ ಸರ್ಕಾರದ ನೋಟಿಸ್  ನಿಂದ ಮಕ್ಕಳು ಹಾಗೂ ಉಪಾಧ್ಯಾಯರು ಆತಂಕಕ್ಕೊಳಗಾಗಿದ್ದಾರೆ.  ಸಮಾಜ ಕಲ್ಯಾಣ ಇಲಾಖೆ  ಇಂತಹ ನಿರ್ಧಾರ ಕೈಗೊಂಡಿದ್ದು,  ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

 ಈ ಬಗ್ಗೆ ಬಿಇಓಗೆ ತಿಳಿಸಲಾಗಿದೆ. ಆದರೆ, ಪರ್ಯಾಯ ಮಾರ್ಗದ ಬಗ್ಗೆ ಶಾಲಾ ಆಡಳಿತಮಂಡಳಿಯಿಂದ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎನ್ನುತ್ತಾರೆ ಶಾಲಾ ಮುಖ್ಯೋಪಾಧ್ಯಾಯ ನಾಗ ನಾಯ್ಕ್

ಶಾಲೆ ಧ್ವಂಸಗೊಳಿಸಿದ ಬಳಿಕ ತಮ್ಮನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪಾಧ್ಯಾಯರಿಗೆ ಏನೂ ಗೊತ್ತಿಲ್ಲ. ಶಾಲೆ ಮುಂದುವರೆಸುವ ಬಗ್ಗೆಯೂ ಸಮಾಜ ಕಲ್ಯಾಣ ಇಲಾಖೆ ಏನೂ ಹೇಳಿಲ್ಲ.

  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಸಾರ್ವಜನಿಕ ಸಲಹಾ ವಿಭಾಗದ ಆಯುಕ್ತ ಪಿ. ಸಿ. ಜಾಫರ್, ಇದರ ಬಗ್ಗೆ  ಯಾವುದೇ ಮಾಹಿತಿ ದೊರಕಿಲ್ಲ. ಶಾಲಾ ಕಲ್ಯಾಣ ಮಂಡಳಿಗೆ ಪತ್ರ ಬರೆದು ಪರಿಶೀಲಿಸುವುದಾಗಿ ಹೇಳುತ್ತಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್