ಗಾಳಿಯ ಆರ್ಭಟಕ್ಕೆ ಮಲ್ಲೇಶ್ವರಂನಲ್ಲಿ ಧರೆಗುರುಳಿರುವ ಮರ 
ರಾಜ್ಯ

ಬೆಂಗಳೂರಿನಲ್ಲಿ ಗಾಳಿ ಆರ್ಭಟ: ಹಲವೆಡೆ ಭಾರೀ ಮಳೆ; ಕೆ.ಆರ್.ಪುರಂನಲ್ಲಿ ಅತೀ ಹೆಚ್ಚು 46 ಮಿ.ಮೀ ಮಳೆ

ನಗರದ ವಿವಿಧೆಡೆ ಶುಕ್ರವಾರ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 13 ಮರಗಳು ಧರೆಗುರುಳಿವೆ...

ಬೆಂಗಳೂರು: ನಗರದ ವಿವಿಧೆಡೆ ಶುಕ್ರವಾರ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 13 ಮರಗಳು ಧರೆಗುರುಳಿವೆ. 
ಸಂಜೆ ವೇಳೆಗೆ ನಗರದ ಹೊರವಲಯದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕೇಂದ್ರ ಭಾಗದ ಪ್ರದೇಶದಲ್ಲಿ ಬಿುಗಾಳಿಯ ಆರ್ಭಟ ಹೆಚ್ಚಾಗಿತ್ತು. ರಾತ್ರಿ ವೇಳೆಗೆ ಕೇಂದ್ರ ಭಾಗದಲ್ಲೂ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಪರಿಣಾಮ ಕೆ.ಜಿ.ರಸ್ತೆ, ರೇಸ್'ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಬ್ಬನ್ ರಸ್ತೆಗಳಲ್ಲಿ ಮರಗಳಲ್ಲಿ ಒಣಗಿದ್ದ ಪುಡಿ ರೆಂಬೆಗಳು, ಎಲೆ ಮತ್ತು ಹೂಗಳ ತ್ಯಾಜ್ಯ ವಿವಿಧ ರಸ್ತೆಯಲ್ಲಿ ಹಾಸಿ ಬೀಳುವಂತೆ ಮಾಡಿತು. 
ಭಾರೀ ಗಾಳಿಯಿಂದ ಧೂಳು ಸಹಿತವಾಗಿ ಈ ತ್ಯಾಜ್ಯ ಒಮ್ಮೆಲೆ ಮೇಳುತ್ತಿದ್ದುದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿತ್ತು. 
ಪೂರ್ವ ಮತ್ತು ಉತ್ತರ ವಲಯಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕೆ.ಆರ್.ಪುರಂನಲ್ಲಿ ಅತೀ ಹೆಚ್ಚು 46 ಮಿ.ಮೀನಷ್ಟು ಮಳೆಯಾಗಿದೆ. ಇದರಿಂದ ಅಲ್ಲಿನ ಅಂಡಲ್ ಪಾಲ್ ನಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಭಾರೀ ಸಮಸ್ಯೆಗಳು ಎದುರಾಗಿತ್ತು. ಅವಲಹಳ್ಳಿ ಹತ್ತಿರವಿರುವ ದೊಡ್ಡಬನಹಳ್ಳಿಯಲ್ಲಿ 21 ಎಂಎಂ ಮಳೆಯಾಗಿದ್ದರೆ, ಯಲಹಂಕದಲ್ಲಿ 16.5 ಮಿ.ಮೀ ಮಳೆಯಾಗಿದೆ. 
ಕೋರಮಂಗಲ. ಹೆಚ್.ಎಸ್.ಆರ್ ಲೇಔಟ್ ಸುತ್ತಮುತ್ತಲ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿತ್ತು, ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಇದರಿಂದಾಗಿ ಆ ಭಾಗದಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. 
ಬಿಬಿಎಂಪಿ ನಿಯಂತ್ರಣ ಕೊಠಿಡಿ ಮಾಹಿತಿ ನೀಡಿದ್ದು, ಬಿರುಗಾಳಿ ಹಾಗೂ ಭಾರೀ ಮಳೆಯ ಪರಿಣಾಮ ನಗರದ ಹಲವೆಡೆ ಮರಗಳು ಧರೆಗುರುಳಿವೆ ಎಂದು ಹೇಳಿದೆ. ಮಲ್ಲೇಶ್ವರಂ ಮತ್ತು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಮರವೊಂದು ಧರೆಗುರುಳಿದ ಪರಿಣಾಮ ಬಾಣಸವಾಡಿಯಲ್ಲಿ ಎರಡು ವಿದ್ಯುತ್ ಕಂಬಗಳು ಧರೆಗುರುಳಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. 
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆಯಾಗುತ್ತಿದ್ದು. ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ