ಕಂಬಳ ವಿವಾದ: 'ಪೇಟಾ' ಆಕ್ಷೇಪಕ್ಕೆ ಹೊಸ ಅಸ್ತ್ರ ಹುಡುಕಿದ ಹೋರಾಟಗಾರರು
ಕಂಬಳ ಸಂದರ್ಭ ಬೆತ್ತ ಹಿಡಿಯುವ ಕುರಿತು ಪ್ರಾಣಿದಯಾ ಸಂಸ್ಥೆ 'ಪೇಟಾ' ಆಕ್ಷೇಪಕ್ಕೆ ಉತ್ತರವಾಗಿ ಕಂಬಳ ಹೋರಾಟಗಾರರು ಹೊಸ ಅಸ್ತ್ರವೊಂದನ್ನು ಹುಡುಕಿದ್ದಾರೆ...
ಮಂಗಳೂರು: ಕಂಬಳ ಸಂದರ್ಭ ಬೆತ್ತ ಹಿಡಿಯುವ ಕುರಿತು ಪ್ರಾಣಿದಯಾ ಸಂಸ್ಥೆ 'ಪೇಟಾ' ಆಕ್ಷೇಪಕ್ಕೆ ಉತ್ತರವಾಗಿ ಕಂಬಳ ಹೋರಾಟಗಾರರು ಹೊಸ ಅಸ್ತ್ರವೊಂದನ್ನು ಹುಡುಕಿದ್ದಾರೆ.
ಕೋಣಕ್ಕೆ ಹೊಡೆದರೂ ತುಂಬಾ ನೋವಾಗದ ಬೆತ್ತವನ್ನು ಹೋರಾಟಗಾರರು ಹುಡುಕಿದ್ದಾರೆ.
ಈ ಬೆತ್ತದ ತುದಿಗೆ ಎರಡಿಂಚು ಅಗಲದ, ಅರ್ಧ ಅಡಿ ಉದ್ದದ ಫೋಮ್ (ಒಂದು ರೀತಿಯ ಸ್ಪಂಜಿನ ದಪ್ಪ ರಿಬ್ಬನ್) ಅನ್ನು ಎರಡೂ ಕಡೆ ಅಂಟಿಸಲಾಗಿದೆ. ಈ ಬೆತ್ತವನ್ನು ಕೋಣ ನಿಯಂತ್ರಣಕ್ಕೆ ಬಾರದಿದ್ದಾಗ ಮಾತ್ರ ಪ್ರಯೋಗಿಸಲಾಗುತ್ತದೆ.
ಸೋಮವಾರ ಕಂಬಳ ಪ್ರಶ್ನಿಸಿ ಪೇಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಅಗತ್ಯಬಿದ್ದರೆ ಇದನ್ನು ಪರಿಶೀಲನೆಗೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಉಡುಪಿ ಕಂಬಳ ಸಮಿತಿ ಮಾಜಿ ಸಂಚಾಲಕ ಸೀತಾರಾಮ ಶೆಟ್ಟಿಯವರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.