ರಾಜ್ಯ

ಬೆಂಗಳೂರಿನ ವಿಶ್ವವಿದ್ಯಾನಿಲಯಗಳಿಗೆ ಇಲ್ಲ ಪ್ರಧಾನಿಯ ಫಿಟ್ ಇಂಡಿಯಾ ಮೂಮೆಂಟ್! 

Srinivas Rao BV

ಬೆಂಗಳೂರು: ಆ.29 ರಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಮೂಮೆಂಟ್ ಗೆ ಚಾಲನೆ ದೊರೆಯಲಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಇದು ಸದ್ಯಕ್ಕೆ ಲಭ್ಯವಿಲ್ಲ. 

ಫಿಟ್ ಇಂಡಿಯಾ ಮೂಮೆಂಟ್ ಗೆ ಅಗತ್ಯವಿರುವ ಯಾವುದೇ ಮೂಲಸೌಕರ್ಯ ತ್ರಿಭಜನೆಯಾಗಿರುವ ವಿಶ್ವವಿದ್ಯಾನಿಲಯಗಳಿಗೆ ಇನ್ನಷ್ಟೇ ಸಿಗಬೇಕಿದೆ.   ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಮೂಮೆಂಟ್ ನ್ನು ಬೆಂಬಲಿಸುವಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಮನವಿ ಮಾಡಿದೆ. 

ಈ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಟಿಡಿ ಕೆಂಪರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಎರಡು ಕೊಠಡಿಯಲ್ಲಿ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಳಿದ ಕ್ರೀಡಾ ಮೂಲಸೌಕರ್ಯಗಳಿಗೆ ನಾವು ಸಜ್ಜುಗೊಳ್ಳಬೇಕಿದೆ. ಇದಕ್ಕಾಗಿ ಸರ್ಕಾರದ ಸಹಾಯವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. 

ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆದರೆ ಮೂಲಸೌಕರ್ಯ ಕೊರತೆ ಇರುವುದರಿಂದ ಕ್ರೀಡಾ ಚಟುವಟಿಕೆಗಳು ನಡೆಯುವುದಕ್ಕೆ ಸಾಧ್ಯವಿಲ್ಲ, ಇನ್ನಷ್ಟು ಕಾಲ ಕಾಯಬೇಕೆಂದು ವಿವಿ ಅಧಿಕಾರಿಗಳು ಹೇಳಿದ್ದಾರೆ. 
 

SCROLL FOR NEXT