ವಿಮಾನ ಅಪಘಾತದ ನಂತರದ ದೃಶ್ಯ 
ರಾಜ್ಯ

ಮೀರಜ್ ಮಿಗ್ 2000 ಯುದ್ಧ ವಿಮಾನ ಪತನ; ಹೆಚ್ಚಿನ ತನಿಖೆಗೆ ಕಪ್ಪು ಪೆಟ್ಟಿಗೆ ಫ್ರಾನ್ಸ್ ಗೆ ರವಾನೆ

ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ವಿಮಾನದ ಕಪ್ಪು ಪೆಟ್ಟಿಗೆಯನ್ನು...

ಬೆಂಗಳೂರು: ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ತರಬೇತಿ ಯುದ್ಧ ವಿಮಾನದ ಕಪ್ಪು ಪೆಟ್ಟಿಗೆಯನ್ನು ದಾಖಲೆಗಳನ್ನು ಪರಿಶೀಲಿಸಲು ಫ್ರಾನ್ಸ್ ಗೆ ಕೊಂಡೊಯ್ಯಲಾಗುತ್ತಿದೆ. ಇಬ್ಬರು ಪೈಲಟ್ ಗಳ ಸಾವಿಗೆ ಕಾರಣವಾದ ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಲು ಅಪಘಾತದ ತನಿಖೆ ನಡೆಸುತ್ತಿರುವ ಭಾರತೀಯ ವಾಯುಪಡೆ ಕಪ್ಪು ಪೆಟ್ಟಿಗೆಯನ್ನು ಫ್ರಾನ್ಸ್ ಗೆ ಕಳುಹಿಸುತ್ತಿದೆ.

ಕಪ್ಪು ಪೆಟ್ಟಿಗೆಗೆ ಸಹ ಸ್ವಲ್ಪ ಹಾನಿಯಾಗಿರುವುದರಿಂದ ಅದನ್ನು ಜಾಗರೂಕತೆಯಿಂದ ಭಾರತೀಯ ವಾಯುಪಡೆ ಫ್ರಾನ್ಸ್ ಗೆ ಕಳುಹಿಸಲಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂದು ಈ ಕಪ್ಪು ಪೆಟ್ಟಿಗೆಯಿಂದ ತಿಳಿದುಬರಲಿದೆ. ಇದಕ್ಕಾಗಿ ಫ್ರಾನ್ಸ್ ಗೆ ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ಸಹ ತೆರಳಲಿದ್ದಾರೆ.

ಭಾರತೀಯ ವಾಯುಪಡೆ ಮತ್ತು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನ ಅಧಿಕಾರಿಗಳ ಸಮ್ಮುಖದಲ್ಲಿ ಫ್ರಾನ್ಸ್ ನ ಸಂಸ್ಥೆಗಳು ಕಪ್ಪು ಪೆಟ್ಟಿಗೆಯ ತನಿಖೆ ನಡೆಸಲಿದ್ದಾರೆ. ಈ ಮಧ್ಯೆ ಭಾರತೀಯ ವಾಯುಪಡೆ ರಾಷ್ಟ್ರೀಯ ವಿಮಾನ ತನಿಖೆ ಕೇಂದ್ರ, ಏರ್ ವೈಸ್ ಮಾರ್ಷಲ್ ತಿವಾರಿಯವರನ್ನು ನೇಮಿಸಿ ಹೆಚ್ ಎಎಲ್ ಜೊತೆ ಸೇರಿ ನ್ಯಾಯಾಲಯದಲ್ಲಿ ಘಟನೆ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಅಪಘಾತದ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದು ಮೃತ ಪೈಲಟ್ ಗಳಾದ ಸ್ಕ್ವಾಡ್ರನ್ ಸಮೀರ್ ಅಬ್ರೊಲ್ ಮತ್ತು ಸಿದ್ಧಾರ್ಥ್ ನೇಗಿ ಒತ್ತಾಯಿಸುತ್ತಿರುವುದರ ಮಧ್ಯೆ ಭಾರತೀಯ ವಾಯುಪಡೆ ಈ ನಿರ್ಧಾರ ಕೈಗೊಂಡಿದೆ. ಭಾರತೀಯ ವಾಯುಪಡೆ ಹಳೆ ಯಂತ್ರಗಳನ್ನು ಬಳಸುತ್ತಿದೆ ಎಂದು ಸಮೀರ್ ಅವರ ಪತ್ನಿ ಗರಿಮ ಅಬ್ರೊಲ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿಸಿದ್ದಾರೆ.

ಅಬ್ರೊಲ್ ಮತ್ತು ನೆಗಿ ಅವರ ಪೋಷಕರು ಘಟನೆ ಬಗ್ಗೆ ತನಿಖೆ ನಡೆಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ