ರಾಜ್ಯ

ಅಮೂಲ್ಯ ಪ್ರಕರಣದ ಮೂಲಕ ಸಿಎಎ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲೂ ಬಿಜೆಪಿ ಯತ್ನ: ವಿಪಕ್ಷಗಳು

Manjula VN

ಬೆಂಗಳೂರು: ಅಮೂಲ್ಯ ವಿರುದ್ಧದ ದೇಶದ್ರೋಹ ಪ್ರಕರಣದ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. 

ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಬಿಜೆಪಿ ನಾಯಕರು ತೀವ್ರವಾಗಿ ಕಿಡಿಕಾರಲು ಆರಂಭಿಸಿದ್ದಾರೆ. ಇದರಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೂ ಕೂಡ ಕಿಡಿಕಾರಿದ್ದು, ಈ ನಡುವೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. 

ಪೌರತ್ವ ಕಾಯ್ದೆ ವಿರುದ್ಧ ಜನರ ಆಕ್ರೋಶವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 

ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ದೇಶದ ವಿರುದ್ಧ ಯುವತಿ ಘೋಷಣೆ ಕೂಗಿರುವುದು ನಿಜಕ್ಕೂ ದೂರಾದೃಷ್ಟಕರ ವಿಚಾರ. ಆದರೆ, ಸರ್ಕಾರ ಈ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದೇ ಹೋದಲ್ಲಿ ಮತ್ತಷ್ಟು ಜನರು ಇಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇಂದಿನ ಯುವ ಪೀಳಿಗೆಯಲ್ಲಿ ದೇಶಪ್ರೇಮ ಬೆಳೆಯಬೇಕು ಎಂದು ಹೇಳಿದ್ದಾರೆ. 

ಸಿಎಎ ವಿರುದ್ಧದ ಪ್ರತಿಭಟನೆ ಪಕ್ಷಗಳು, ಧರ್ಮ, ಜಾತಿಯನ್ನು ವಿಭಾಗಿಸುತ್ತಿದೆ. ಪ್ರತೀ ಸಮುದಾಯ ಹಾಗೂ ಸಮಾಜದ ಜನರು ಬೀದಿಗಿಳಿದು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇಂತಹ ಪ್ರತಿಭಟನೆಗಳ ಕುರಿತ ಜನರ ಬೇರೆಡೆಗೆ ಸೆಳೆಯುವ ಯತ್ನಗಳು ನಡೆಯಬಾರದು ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸೂಕ್ತ ಸಂಸ್ಥೆಗೆ ತನಿಖೆ ವಹಿಸಿ ಸರ್ಕಾರ ಕ್ರಮ ಕೈಗೊಳ್ಲಬೇಕು. ಪ್ರತೀಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ, ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದ್ದಾರೆ. 

ಜೆಡಿಎಸ್ ಹಿರಿಯ ನಾಯಕ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಇದಲ್ಲದೆ, ಸಾಕಷ್ಟು ವಿಚಾರಗಳತ್ತ ಗಮನ ಹರಿಸುವ ಅಗತ್ಯವಿದೆ. ಮಂಗಳೂರು ಗೋಲಿಬಾರ್, ಬೀದರ್ ದೇಶದ್ರೋಹ ಪ್ರಕರಗಳಿವೆ. ಅಮೂಲ್ಯ ಮತ್ತು ಆರ್ದ್ಯಾ ಪ್ರಕರಣಗಳು ಕೇವಲ ಗಮನ ಬೇರೆಡೆ ಸೆಳೆಯುವ ಯತ್ನಗಳಷ್ಟೇ ಎಂದಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಪ್ರಕರಣಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. 

SCROLL FOR NEXT