ರಾಜ್ಯ

ಐಐಎಸ್ಸಿಯ ನೂತನ ನಿರ್ದೇಶಕರಾಗಿ ಗೋವಿಂದನ್ ರಂಗರಾಜನ್ ನೇಮಕ 

Raghavendra Adiga

ಬೆಂಗಳೂರು: ಗೋವಿಂದನ್ ರಂಗರಾಜನ್ ಪ್ರಸಿದ್ಧ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮುಂದಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಐಐಎಸ್ಸಿ ನಿರ್ದೇಶಕರಾಗಿರುವ ಅನುರಾಗ್ ಕುಮಾರ್ ಅವರು ಜುಲೈ 31 ರಂದು ನಿವೃತ್ತರಾಗಲಿದ್ದು ಆ ನಂತರ ಆಗಸ್ಟ್ 1ಕ್ಕೆ ರಂಗರಾಜನ್ ಅಧಿಕಾರ ವಹಿಸಿಕೊಳ್ಲಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿಗೆ ಬಳಿಕ ಸಂಸ್ಥೆಯ ಆಡಳಿತ ಮಂಡಳಿ ಆಗಸ್ಟ್ 1 ರಿಂದ ರಂಗರಾಜನ್ ಅವರನ್ನು ಮುಂದಿನ ನಿರ್ದೇಶಕರಾಗಿ ನೇಮಕ ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

56 ವರ್ಷದ ರಂಗರಾಜನ್ ನಗರದ ವಾಯುವ್ಯ ಭಾಗದಲ್ಲಿರುವ ಸಂಸ್ಥೆಯ ವಿಸ್ತಾರವಾದ ಕ್ಯಾಂಪಸ್ ನಲ್ಲಿರುವ 10 ವಿಭಾಗಗಳು ಮತ್ತು ಕೇಂದ್ರಗಳನ್ನು ಒಳಗೊಂಡ  ಇಂಟರ್-ಡಿಸಿಪ್ಲಿನ್ ಸಂಶೋಧನೆಯ ಅಧ್ಯಕ್ಷರಾಗಿದ್ದಾರೆ.  ಗಣಿತ ವಿಭಾಗ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಕೋಶದಲ್ಲಿ ಸಹ ಅವರು ಸೇವೆ ಸಲ್ಲಿಸಿದ್ದಾರೆ.

ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಸೈನ್ಸ್‌ನಿಂದ ಸ್ನಾತಕೋತ್ತರ ಪದವಿ (ಎಂ.ಎಸ್ಸಿ ಹಾನರ್ಸ್) ಪಡೆದ ನಂತರ, ರಂಗರಾಜನ್ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಾಕ್ಟರೇಟ್ ಪಡೆದರು ಮತ್ತು 1992 ರಲ್ಲಿ ಭಾರತಕ್ಕೆ ಮರಳುವ ಮೊದಲು ಯುಎಸ್‌ನ ಲಾರೆನ್ಸ್ ಬರ್ಕ್ಲಿಯಲ್ಲಿ ಸಹ ಸೇವೆ ಸಲ್ಲಿಸಿದ್ದರು. "ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಕ್ಕೆ  ಪರಿಣಾಮಕಾರಿಯಾದ ಕೊಡುಗೆ ನೀಡಿರುವ 111 ವರ್ಷಗಳ ಹಳೆಯ  ಸಂಸ್ಥೆಯ ಮುಂದಿನ ನಿರ್ದೇಶಕರಾಗಿ ನೇಮಕಗೊಳ್ಳುವುದು ಗೌರವ ಮತ್ತು ಹೆಮ್ಮೆಯ ಸಂಗತಿ"  ರಂಗರಾಜನ್ ಹೇಳಿದರು.

SCROLL FOR NEXT