ರಾಜ್ಯ

ಸೌಂದರ್ಯ ಸ್ಪರ್ಧೆ ವಿಜೇತೆ ಮಿಸ್ ದಿವಾಗೆ ಶುಭಕೋರಿದ ಮುಖ್ಯಮಂತ್ರಿ ಯಡಿಯೂರಪ್ಪ

Manjula VN

ಬೆಂಗಳೂರು: ಲೀವಾ ಮಿಸ್ ದೀವಾ ಯೂನಿವರ್ಸ್-2020’ ಸೌಂದರ್ಯ ಸ್ಪರ್ಧೆ ವಿಜೇತೆಯಾದ ಅಡ್ಲಿನ್ ಕ್ಯಾಸ್ಟಲಿನೊ ಸೋಮವಾರ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿದರು.

ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿಯಾಗಿರುವ ಅಡ್ಲೀನ್ ಕ್ಯಾಸ್ಟಲಿ ನೊ ಅವರನ್ನು ಮುಖ್ಯಮಂತ್ರಿ ಅವರು ಇದೇ ವೇಳೆ ಅಭಿನಂದಿಸಿದರು.

ಮಿಸ್ ದಿವಾ 2020ಯ 8ನೇ ಆವೃತ್ತಿಯ ಸ್ಪರ್ಧೆ ಫೆ. 22ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದಿತ್ತು. 20 ಸ್ಪರ್ಧಿಗಳು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಭಾಗವಹಿಸಿದ್ದರು. ಕೊನೆಗೆ ಲೀವಾ ಮಿಸ್ ದಿವಾ ‘ಮಿಸ್ ಯೂನಿವರ್ಸ್ ಇಂಡಿಯಾ 2020ರ ’ ಕಿರೀಟವನ್ನು ಕನ್ನಡತಿ ಅಡ್ಲೀನ್ ಕ್ಯಾಸ್ಟಲಿನೊ ಮುಡಿಗೇರಿಸಿ ಕೊಂಡಿದ್ದರು.

SCROLL FOR NEXT