ಸಾಂದರ್ಭಿಕ ಚಿತ್ರ 
ರಾಜ್ಯ

ಹಸುಗೂಸನ್ನು ಒಲೆಗೆ ಹಾಕಿ ಬೆಂಕಿ ಹಚ್ಚಿದ ತಾಯಿ; ಬೆಚ್ಚಿಬಿದ್ದ ಚಿಕ್ಕಮಗಳೂರು

ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಚಿಕ್ಕಮಗಳೂರಿನ ಈ ಮಹಿಳೆ ಸುಳ್ಳಾಗಿಸಿದ್ದಾಳೆ. ತಾನು ಹೆತ್ತ ಮಗುವನ್ನು ನಿರ್ದಾಕ್ಷಿಣ್ಯದಿಂದ ಒಲೆಯೊಳಗೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಚಿಕ್ಕಮಗಳೂರು: ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಚಿಕ್ಕಮಗಳೂರಿನ ಈ ಮಹಿಳೆ ಸುಳ್ಳಾಗಿಸಿದ್ದಾಳೆ. ತಾನು ಹೆತ್ತ ಮಗುವನ್ನು ನಿರ್ದಾಕ್ಷಿಣ್ಯದಿಂದ ಒಲೆಯೊಳಗೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಹೆತ್ತ ತಾಯಿಯೊಬ್ಬಳು ತನ್ನ ಮಗುವನ್ನು ಒಲೆಯೊಳಗೆ ಹಾಕಿ ಸುಟ್ಟ ಘಟನೆ ನಡೆದಿದೆ. ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ 23 ದಿನಗಳ ಹಸುಗೂಸನ್ನು ಕೋಪದಿಂದ ಅಡುಗೆಮನೆಯ ಒಲೆಯಲ್ಲಿ ಮಗುವನ್ನು ಹಾಕಿ, ಅದರ ಮೇಲೆ ಸೌದೆಗಳನ್ನಿಟ್ಟು ಬೆಂಕಿ ಹಚ್ಚಿದ ಅಮ್ಮನ ಕೃತ್ಯಕ್ಕೆ ಚಿಕ್ಕಮಗಳೂರು ಬೆಚ್ಚಿಬಿದ್ದಿದೆ.

ಅಮ್ಮನ ಈ ಕೃತ್ಯದಿಂದ 23 ದಿನದ ಹಸುಗೂಸು ಒಲೆಯಲ್ಲಿ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ನಾಯಕನಹಟ್ಟಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಬಾಯಿಂದ ಮಗುವಿನ ಕುತ್ತಿಗೆ ಕಚ್ಚಿ ಒಲೆಗೆ ತುಂಬಿದ ತಾಯಿ 23 ದಿನಗಳ ಮಗುವನ್ನು ಸಾಯಿಸಿದ್ದಾಳೆ.

ಈ ಘಟನೆಯಿಂದ ಕಡೂರು ಬೆಚ್ಚಿಬಿದ್ದಿದ್ದು, ಮಗುವನ್ನು ಕೊಂದ ತಾಯಿ ಸಂಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಹುಟ್ಟಿತೆಂಬ ಕಾರಣಕ್ಕೆ ಮಗುವನ್ನು ಕೊಲ್ಲಲು ಪ್ರೇರೇಪಿಸಿದ ಸಂಗೀತಾಳ ಕುಟುಂಬಸ್ಥರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!

ಅಲೆಗಳಿಗೇ ಸವಾಲು; ಪುರುಷರ ವೃತ್ತಿಯಲ್ಲಿ ಮಂಗಳೂರು ಯುವತಿ ದಿಟ್ಟ ಹೆಜ್ಜೆ: ಆಳ ಸಮುದ್ರ ಮೀನುಗಾರಿಕೆಯಲ್ಲಿ ಪ್ರಾಪ್ತಿ ಮೆಂಡನ್ ಸಾಧನೆ

ಅರ್ಧ ದಿನ ಆತಂಕ ಸೃಷ್ಟಿಸಿದ ಬಾಲಕ: ಕಾಣೆಯಾದ ಪೋರನಿಗಾಗಿ ಇಡೀ ಊರಿಗೆ ಊರೇ ಹುಡುಕಾಟ-ಆತಂಕ; ಕೊನೆಗೆ ಮನೆಯಲ್ಲೇ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆ..!

ಕೇಂದ್ರ ಸರ್ಕಾರ ಟ್ರಂಪ್‌ನ ಕೈಗೊಂಬೆಯಂತೆ ವರ್ತಿಸುತ್ತಿದೆ: ಸಚಿವ ಡಾ.ಎಂ.ಸಿ. ಸುಧಾಕರ್

SCROLL FOR NEXT