ಲಾಕ್'ಡೌನ್ ತೆರವು ಬಳಿಕ ಸೋಂಕಿತರ ಸಂಖ್ಯೆ 28,000ಕ್ಕೆ ಏರಿಕೆ ಸಾಧ್ಯತೆ: ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧವಿದೆಯೇ?
ರಾಜ್ಯದಲ್ಲಿ ಲಾಕ್'ಡೌನ್ ತೆರವುಗೊಳಿಸಿದ ಬಳಿಕ ಸೋಂಕಿತ ಸಂಖ್ಯೆ 28,000ಕ್ಕೆ ಏರಿಕೆಯಾಗುವ ಹಾಗೂ ಸಾವಿನ ಸಂಖ್ಯೆ ಶೇ.7ರಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಈ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಬೆಂಗಳೂರು: ರಾಜ್ಯದಲ್ಲಿ ಲಾಕ್'ಡೌನ್ ತೆರವುಗೊಳಿಸಿದ ಬಳಿಕ ಸೋಂಕಿತ ಸಂಖ್ಯೆ 28,000ಕ್ಕೆ ಏರಿಕೆಯಾಗುವ ಹಾಗೂ ಸಾವಿನ ಸಂಖ್ಯೆ ಶೇ.7ರಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಈ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಈಗಾಗಲೇ ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರು ಕಳೆದ ವಾರವೇ ಹೇಳಿಕೆ ನೀಡಿದ್ದಾರೆ. ಆದರೆ, ಆಕ್ಸಿಜನ್ ಬೆಡ್ ಗಳನ್ನು ಹೊರಡುಪಡಿಸಿದರೆ, ರಾಜ್ಯದಲ್ಲಿ ಪಿಪಿಇ ಸೂಟ್ ಗಳು ಸೇರಿದಂತೆ ಇನ್ನಿತರೆ ವೈದ್ಯಕೀಯ ಸುರಕ್ಷತಾ ಪರಿಕರಗಳ ಸಿದ್ಧತೆಗಳಾಗಿವೆ ಎಂಬುದು ಕೇವಲ ಪೇಪರ್ ಗಳಲ್ಲಿ ಮಾತ್ರವೇ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಲಾಕ್'ಡೌನ್ ಬಳಿಕ ಎದುರಾಗುವ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿರಬೇಕಿದೆ. ಸರ್ಕಾರದ ಸಿದ್ಧತೆಯೇ ಮುಂದಿನ ಬೆಳವಣಿಗೆ ಹೆಚ್ಚುವುದು ಹಾಗೂ ಕಡಿಮೆಯಾಗುವುದನ್ನು ನಿರ್ಧರಿಸುತ್ತದೆ ಎಂದು ಆರೋಗ್ಯ ತಜ್ಞ ಅನಂತ್ ಬಾನ್ ಅವರು ತಿಳಿಸಿದ್ದಾರೆ.
ಮೇ ಅಂತ್ಯದೊಳಗಾಗಿ ವೈರಸ್ ಬೆಳೆಯುವುದು ಹಾಗೂ ನಿಯಂತ್ರಣಗೊಳ್ಳುವ ಫಲಿತಾಂಶ ಹೊರಗೆ ಬೀಱಲಿದೆ. ಹಾಟ್'ಸ್ಪಾಟ್ ಗಳಲ್ಲಿ ತೀವ್ರ ರೀತಿಯಲ್ಲಿ ಕಟ್ಟೆಚ್ಚರ ವಹಿಸಬೇಕಿದೆ. ಲಾಕ್'ಡೌನ್ ನ್ನು ಸಂಪೂರ್ಣವಾಗಿ ತೆರವುಗೊಳಿಸುವುದೂ ಕೂಡ ಉತ್ತಮವಾದ ಆಲೋಚನೆಯಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ವೈದ್ಯನಾಗಿ ಇಂತಹ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆಂದು ನನಗೆ ಅನಿಸುತ್ತಿಲ್ಲ ಎಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.