ರಾಜ್ಯ

ಅರ್ಜಿ ಸಲ್ಲಿಸಿದರೆ ಸಾಕಾಗದು, ಅನುಮತಿ ಪಡೆಯಬೇಕು: ವಲಸೆ ಕಾರ್ಮಿಕರಿಗೆ ಪೊಲೀಸರ ಸೂಚನೆ

Shilpa D

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ನೇಮಿಸಿರುವ ಪೊಲೀಸರಿಗೆ ಸಮಸ್ಯೆ ಉಂಟಾಗುತ್ತಿದೆ. ರಾಜ್ಯ ಪ್ರವೇಶಿಸುವ ವಲಸಿಗರನ್ನು ಚೆಕ್ ಪೊಸ್ಟ್ ನಲ್ಲಿ ಪೊಲೀಸರು ತಡೆದು ಅವರ ಪ್ರವೇಶ ಅನುಮತಿ ಪರಿಶೀಲನೆ ನಡೆಸುತ್ತಾರೆ.

ಈ ವೇಳೆ ಕೆಲವು ವಲಸಿಗರು, ಗಡಿ ದಾಟಲು ಅನುಮತಿ ಪಡೆದಿರುವುದಿಲ್ಲ, ಅವರನ್ನು ಪ್ರಶ್ನಿಸಿದರೇ ತಾವು ಪ್ರವೇಶಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಕಾರಣ ನೀಡುತ್ತಿದ್ದಾರೆ.

ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿರುವವರು ಕಡ್ಡಾಯವಾಗಿ  ಅನುಮತಿ ಪಡೆದಿರಬೇಕು, ಅಂತವರನ್ನು ಮಾತ್ರ ರಾಜ್ಯಪ್ರವೇಶಿಸಲು ಬಿಡುವುದಾಗಿ ಪೊಲೀಸರು ಖಡಕ್ ಸಂದೇಶ ನೀಡಿದ್ದಾರೆ.

ನಿಪ್ಪಾಣಿ ಗಡಿಯಲ್ಲಿ ಶವವನ್ನು ಸಾಗಿಸುತ್ತಿದ್ದ ವಾಹನ ತಡೆಯಬೇಕಾಯಿತು, ನಾವು ಯಾರೋಬ್ಬರನ್ನು ತಡೆದು ತೊಂದರೆ ಕೊಡಲು ಇಷ್ಟವಿಲ್ಲ, ಆದರೆ ನಮ್ಮ ಕರ್ತವ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT