ಸಂಗ್ರಹ ಚಿತ್ರ 
ರಾಜ್ಯ

ರಿವರ್ಸ್ ಗೇರ್ ನಲ್ಲಿದ್ದ ಕಾರು ಚಲಿಸಿ ಮರದ ನಡುವೆ ಸಿಲುಕಿದ ಮಹಿಳೆ ಸಾವು!

ಬಾಗಿಲು ತೆರೆದು ಆನ್ ಮಾಡಿದ ಕೂಡಲೇ ರಿವರ್ಸ್ ಗೇರ್ ನಲ್ಲಿದ್ದ ಕಾರು ಬಾಗಿಲು ಮತ್ತು ಮರದ ನಡುವೆ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ. 

ಬೆಂಗಳೂರು: ಬಾಗಿಲು ತೆರೆದು ಆನ್ ಮಾಡಿದ ಕೂಡಲೇ ರಿವರ್ಸ್ ಗೇರ್ ನಲ್ಲಿದ್ದ ಕಾರು ಬಾಗಿಲು ಮತ್ತು ಮರದ ನಡುವೆ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ. 

ಬಿಇಎಲ್ ರಸ್ತೆ ಆರ್'ಕೆ ಗಾರ್ಡನ್ 4ನೇ ಕ್ರಾಸ್ ನಂದಿನಿ ರಾವ್ (45) ಮೃತ ದುರ್ದೈವಿ. ಮನೆ ಮುಂದೆ ನೆರಳಿಗೆ ಕಾರನ್ನು ನಿಲ್ಲಿಸಲು ಬುಧವಾಹ ಮಧ್ಯಾಹ್ನ ನಂದಿನಿ ತೆರಳಿದ್ದಾಗ ಈ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಂದಿನಿ ಅವರ ಪತಿ ರಾಜೇಶ್ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಮಗುವಿಗೆ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಮನೆಯ ಮುಂದೆ ಮರದಡಿ ನಿಲ್ಲಿಸಿದ್ದ ಹೊಂಡಾ ಸಿಟಿ ಕಾರಿಗೆ ಬಿಸಿಲು ಬೀಳುತ್ತಿದ್ದ ಕಾರಣ, ಕಾರನ್ನು ಪಕ್ಕಕ್ಕೆ ನಿಲ್ಲಿಸಲು ನಂದಿನಿ ಬಂದಿದ್ದರು. 

ಮನೆ ಮುಂದೆ ಇಳಿಜಾರು ಪ್ರದೇಶವಿರುವ ಕಾರಣ ರಿವರ್ಸ್  ಗೇರ್ ನಲ್ಲೇ ಕಾರನ್ನು ನಿಲ್ಲಿಸಲಾಗಿತ್ತು. ಬಾಗಿಲು ತೆರೆದು ಹೊರಗಿನಿಂದಲೇ ನಂದಿನಿ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ರಿವರ್ಸ್ ಗೇರ್ ನಲ್ಲಿದ್ದ ಕಾರಣಕ್ಕೆ ತಕ್ಷಣವೇ ಕಾರು ಚಲಿಸಿದೆ. ಅನಿರೀಕ್ಷಿತ ಘಟನೆಯಿಂದ ಅವರು ಪಾರಾಗುವ ವೇಳೆಗೆ ಕಾರಿನ ಬಾಗಿಲು ಬಡಿದಿದೆ. 

ಬಾಗಿಲು ಸಮೇತ ಅವರು ಸಾಗಿದ್ದು, ಕಾರು ಮತ್ತು ಮರದ ನಡುವೆ ಅವರು ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಅವರು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಹೊಂಡಾ ಸಿಟಿ ಆಗಿದ್ದರಿಂದ ಅವುಗಳ ರಿಸರ್ವ್ ಗೇರ್ ನಲ್ಲಿದ್ದರು ಗರಿಷ್ಠ ಪ್ರಮಾಣದ ವೇಗ ಮಿತಿಯಲ್ಲಿರುತ್ತದೆ. ಹೀಗಾಗಿ ಆನ್ ಮಾಡಿದ ಕೂಡಲೇ ಕಾರು ಚಲಿಸಿದಾಗ ಅವರಿಗೆ ನಿಯಂತ್ರಿಸಲು ಸಾಧ್ಯವವಾಗಿಲ್ಲ. ಅವರು ತಪ್ಪಿಸಿಕೊಳ್ಳಲೂ ಕೂಡ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಸದಾಶಿವಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT