ರಾಜ್ಯ

ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ, ಆತಂಕ ಪಡುವ ಅಗತ್ಯವಿಲ್ಲ: ಸಿಎಂ ಬಿಎಸ್ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ, ಆತಂಕ ಪಡುವ ಅಗತ್ಯವಿಲ್ಲ. ರೈತರ ಪ್ರತಿಭಟನೆ ,ಬೇಡಿಕೆ ವಿಚಾರವಾಗಿ ರೈತಮುಖಂಡರ ಜೊತೆ ಮಾತುಕತೆ, ಚರ್ಚೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಪಿಎಂಸಿ ಕಾಯಿದೆ ಮತ್ತು ಭೂ ಸುಧಾರಣಾ ಕಾಯ್ದೆ ಜಾರಿಯಿಂದ ರೈತರಿಗೆ ಯಾವುದೇ ತೊಂದರೆ, ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೀರಾವರಿ ಜಮೀನು ಖರೀದಿ ಮಾಡಿದವರು ಅದನ್ನ ನೀರಾವರಿಗೆಯೇ ಬಳಸಬೇಕು ಎಂದು ಷರತ್ತು ಹಾಕಲಾಗಿದೆ. ರೈತರಿಗೆ ರಾಜ್ಯಕ್ಕೆ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಕೈಗಾರಿಕೆಗಳಿಗೋಸ್ಕರ ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ಕೇವಲ ಶೇ 2.ರಷ್ಟು ಜಮೀನು ಮಾತ್ರ ಎಂದರು.

ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಮುಖಂಡರು ಹೀಗೆ ಮಾಡಿಕೊಂಡು ಬರಲಿ ಎಂದು ವ್ಯಂಗಮಾಡಿದರು. ಹೀಗೆ ಮಾಡುವುದರಿಂದ ಆರು ತಿಂಗಳ ಕಾಲ ವಿಶ್ವಾಸ, ಹೊಸ ಹುಮ್ಮಸ್ಸು ಬರಲಿದೆ ಎಂದು ಬಹಳ ವ್ಯಂಗವಾಗಿಯೇ ಯಡಿಯೂರಪ್ಪ ಹೇಳಿದರು. 

SCROLL FOR NEXT