ರಾಜ್ಯ

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 8.20 ಲಕ್ಷ ಮೌಲ್ಯದ 70 ಮೊಬೈಲ್ ವಶ, ಮೂವರ ಸೆರೆ

Raghavendra Adiga

ಬೆಂಗಳೂರು: ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾ ಮೊಬೈಲ್ ಫೋನ್ ಕದಿಯುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ,

ಬಂಧಿತರನ್ನು ಇಮ್ರಾನ್ ಖಾನ್, ಇರ್ಫಾನ್ ಪಾಷಾ ಮತ್ತು ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು 8.20 ಲಕ್ಷ ರೂ. ಮೌಲ್ಯದ 70 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಕದ್ದ ಮೊಬೈಲ್ ಮಾರಾಟ ನಡೆಸಿದ್ದರು. ವಿ ವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT