ರಾಜ್ಯ

ಬೆಂಗಳೂರು: ನಗರದ ಸ್ಪಷ್ಟ ಕೊರೊನಾ ಚಿತ್ರಣ ನೀಡಲಿರುವ ಬಿಬಿಎಂಪಿ ಹೊಸ ಆಪ್

Harshavardhan M

ಬೆಂಗಳೂರು: ಕೊರೊನಾ ಪರಿಸ್ಥಿತಿ ಮೇಲೆ ತೀವ್ರ ನಿಗಾ ಇರಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಆಪ್ ವೊಂದನ್ನು ರೂಪಿಸಿದ್ದು, ಸರ್ಕಾರದ ಒಪ್ಪಿಗೆಗೆ ಕಾಯುತ್ತಿದೆ. 

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಆಪ್ ಸಿದ್ಧವಾಗಿದೆ. ಎರಡನೇ ಕೊರೊನಾ ಅಲೆ ಸಂದರ್ಭದಲ್ಲಿ ಈ ಆಪ್ ರೂಪುರೇಷೆ ಸಿದ್ಧಗೊಂಡಿತ್ತು ಎಂದು ತಿಳಿದುಬಂದಿದೆ. 

ಈ ನೂತನ ಆಪ್ ಕೊರೊನಾ ಪರೀಕ್ಷೆಯಾದ ಸ್ವಾಬ್ ಟೆಸ್ಟ್ ನಿಂದ ಮೊದಲಾಗಿ ಸ್ಯಾಂಪಲ್ ಅನ್ನು ಲ್ಯಾಬ್ ಗೆ ಕಳಿಸಿ ವರದಿ ಹೊರಬರುವರೆಗಿನ ಸಂಪೂರ್ಣ ಮಾಹಿತಿಯನ್ನು ಬಳಕೆದಾರರಿಗೆ ನೀಡಲಿದೆ. ಅಲ್ಲದೆ ಬಳಕೆದಾರರ ಸಂಪರ್ಕಕ್ಕೆ ಬಂದವರ ಕೊರೊನಾ ಪರೀಕ್ಷಾ ಮಾಹಿತಿ, ಒಮಿಕ್ರಾನ್ ಕುರಿತ ಮಾಹಿತಿ ಮತ್ತಿತರ ದತ್ತಾಂಶವನ್ನೂ ಆಪ್ ಸಂಗ್ರಹಿಸಿ ಒದಗಿಸಲಿದೆ.

ಶುರುವಿನಲ್ಲಿ ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಈ ಅಪ್ ಅನ್ನು ಪರೀಕ್ಷಾರ್ಥ ಬಿಡುಗಡೆಗೊಳಿಸಿ ನಂತರ ನಗರದ ಇತರೆಡೆ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT