ದೂದ್ ಸಾಗರ್ ಜಲಪಾತದ ದೃಶ್ಯ (ಸಂಗ್ರಹ ಚಿತ್ರ) 
ರಾಜ್ಯ

ಮುಂಗಾರು ಮಳೆ: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದೂದ್ ಸಾಗರ್ ಜಲಪಾತ!

ಚಲಿಸುತ್ತಿರುವ ರೈಲಿನಿಂದ ಮನಮೋಹಕವಾಗಿ ಕಾಣುವ ದೂದ್ ಸಾಗರ್ ಜಲಪಾತಕ್ಕೆ ತಲುಪುವುದು ಸುಲಭ ಸಾಧ್ಯವಲ್ಲದೇ ಇದ್ದರೂ ಸಹ ಸೌತ್ ವೆಸ್ಟ್ರನ್ ರೈಲ್ವೆ ವಿಭಾಗ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನಾಗಿಸಲು  ಹಲವು ಕ್ರಮಗಳನ್ನು ಕೈಗೊಂಡಿದೆ. 

ಬೆಳಗಾವಿ: ಕರ್ನಾಟಕ-ಗೋವಾ ಗಡಿ ಭಾಗದಲ್ಲಿರುವ ದೂದ್ ಸಾಗರ್ ಜಲಪಾತದ ಅಂದ, ಪ್ರಕೃತಿಯ ಸೊಬಗನ್ನು ಸವಿಯಲು ಯಾರಿಗೆ ತಾನೆ ಆಸಕ್ತಿ ಇರುವುದಿಲ್ಲ ಹೇಳಿ.. ಇಂತಹ ಸೊಬಗಿನ ತಾಣ ಈಗ ಮುಂಗಾರಿನಲ್ಲಿ ಹಚ್ಚ ಹಸಿರನ್ನು ಹೊದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಚಲಿಸುತ್ತಿರುವ ರೈಲಿನಿಂದ ಮನಮೋಹಕವಾಗಿ ಕಾಣುವ ದೂದ್ ಸಾಗರ್ ಜಲಪಾತಕ್ಕೆ ತಲುಪುವುದು ಸುಲಭ ಸಾಧ್ಯವಲ್ಲದೇ ಇದ್ದರೂ ಸಹ ಸೌತ್ ವೆಸ್ಟ್ರನ್ ರೈಲ್ವೆ ವಿಭಾಗ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಇತ್ತೀಚಿನ ದಿನಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. 

ಮಾಜಿ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ದೂದ್ ಸಾಗರ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವುದಕ್ಕಾಗಿ ದೂದ್ ಸಾಗರ್ ರೈಲ್ವೆ ನಿಲ್ದಾಣದಿಂದ 600 ಮೀಟರ್ ಗಳಷ್ಟು ದೂರವಿರುವ ಪ್ರದೇಶದಲ್ಲಿನ ಪ್ರಕೃತಿಯ ಸೊಬಗನ್ನು ಪ್ರವಾಸಿಗರು ಆಸ್ವಾದಿಸುವುದಕ್ಕೆ ಸಾಧ್ಯವಾಗುವಂತೆ ಹಲವು ಕ್ರಮಗಳನ್ನು ಕೈಗೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡ್ದಿದರು.

ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಟೀ ಸ್ಟಾಲ್ ಹಾಗೂ ರೈಲ್ವೆ ನಿಲ್ದಾಣದಿಂದ ಜಲಪಾತಕ್ಕೆ ತಲುಪಲು ಪಾಥ್ ವೇ ಗಳನ್ನು ದೂದ್ ಸಾಗರ್ ಜಲಪಾತ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತೇಜಿಸಲು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಕೋವಿಡ್ ನಿಂದಾಗಿ ಪ್ರವಾಸಿಗರು ಬರಲು ಸಾಧ್ಯವಾಗಿರಲಿಲ್ಲ. ಈಗ ಕೋವಿಡ್ ನಿರ್ಬಂಧಗಳು ಸಡಿಲಗೊಂಡಿದ್ದು, ದೂದ್ ಸಾಗರ್ ಜಲಪಾತದಲ್ಲಿ ಪ್ರವಾಸಿಗರು ಸೇರುವ ನಿರೀಕ್ಷೆ ಇದೆ.

"ಮೊರ್ಮುಗೋವಾ ಪೋರ್ಟ್ ನಿಂದ ಕಾಸ್ಟಲ್ ರಾಕ್ ರೈಲ್ವೆ ಲೈನ್ ಈ ಹಿಂದಿನ ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ಗ್ಯಾರೆಂಟೀಡ್ ರೈಲ್ವೆ (ಡಬ್ಲ್ಯುಐಪಿಜಿಆರ್) ನ ಭಾಗವಾಗಿತ್ತು. ಕಾಸ್ಟೆಲ್ ರಾಕ್ ಬ್ರಿಟೀಷ್ ನವರ ಅಡಿಯಲ್ಲಿದ್ದ ಭಾರತ ಹಾಗೂ ಪೋರ್ಚುಗಲ್ ನ ಗಡಿಯಾಗಿತ್ತು" ಎಂದು ಎಸ್ ಡಬ್ಲ್ಯುಆರ್ ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ಹೇಳಿದ್ದಾರೆ.

ರೈಲ್ವೆ ನಿಲ್ದಾಣದಿಂದ ಜಲಪಾತದವರೆಗೂ ಕಾಂಟ್ರಿಟ್ ಸ್ಲೀಪರ್ ಗಳು, ದೂದ್ ಸಾಗರ್ ಜಲಪಾತದ ಎದುರು ಕುಳಿತು ಪ್ರಕೃತಿ ಸೊಬಗನ್ನು ಆಸ್ವಾದಿಸಲು ಸ್ಟೆಪ್ಡ್ ಗಾರ್ಡನ್, ಬೆಂಚ್, ಸೂರುಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಏಕ ಕಾಲಕ್ಕೆ 75 ಜನರು ಬರುವಷ್ಟು ಸೌಲಭ್ಯಗಳನ್ನು, ವ್ಯೂ ಪಾಯಿಂಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ" ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT