ರಾಜ್ಯ

ನಾಡಿನ ಸಮಸ್ತ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ ರಾಜಕೀಯ ನಾಯಕರು, ಗಣ್ಯರು

Harshavardhan M

ಬೆಂಗಳೂರು: ವಿವಿಧ ರಾಜಕೀಯ ಮುಖಂಡರು ನಾಡಿನ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ್ದಾರೆ. 

”ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಸುಸಂದರ್ಭದಲ್ಲಿ ನರಕ ಚತುರ್ದಶಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ದುಷ್ಟಶಿಕ್ಷಣ ಹಾಗೂ ಶಿಷ್ಟರಕ್ಷಣದ ಸಂಕೇತವಾಗಿರುವ ನರಕ ಚತುರ್ದಶಿ ಹಬ್ಬವು ಜನರ ಎಲ್ಲ ದುರಿತಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ”  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ಕೋರಿದ್ದಾರೆ. 

ನಾಡಿನ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಈ ಸಂಭ್ರಮದ ಬೆಳಕಿನ ಹಬ್ಬವು ನೋವುಗಳ ಕತ್ತಲೆಯನ್ನು ದೂರಸರಿಸಿ ನಲಿವಿನ ಬೆಳಕನ್ನು ಪಸರಿಸಲಿ, ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿಗಳನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಕೋವಿಡ್ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನಾಚರಿಸೋಣ’ ಎಂದು ಬಿ ಎಸ್ ಯಡಿಯೂರಪ್ಪ ಕೂ ಮಾಡಿದ್ದಾರೆ. 

Rural development ministry
‘ಈ ಹಬ್ಬದ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿದೆ. 

BY Vijayendra
‘ರಾಜ್ಯದ ಜನತೆಗೆ ನರಕಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವಾದ ಸಂಭ್ರಮದ ದೀಪಾವಳಿಯು ರಾಜ್ಯದ ಪ್ರತಿ ಕುಟುಂಬಗಳನ್ನು ಜ್ಞಾನ, ಸತ್ ಚಿಂತನೆಗಳಿಂದ ಬೆಳಗಿಸಲಿ. ಬದುಕಿನ ಎಲ್ಲಾ ಸಂಕಷ್ಟ, ಅಂಧಕಾರ, ರೋಗಗಳು ನಿವಾರಣೆಯಾಗಿ ಸಂತಸ, ಸಂಭ್ರಮ ನೆಲೆಗೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ’ ಎಂದು ಬಿ ವೈ ವಿಜಯೇಂದ್ರ  ಕೂ ಮಾಡಿದ್ದಾರೆ.

Koo App
ರಾಜ್ಯದ ಜನರಿಗೆ ನರಕಚತುರ್ದಶಿ ಮತ್ತು ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸಡಗರ, ಸಂಭ್ರಮದ ಈ ಹಬ್ಬ ತಮ್ಮೆಲ್ಲರ ಮನೆಮನಗಳನ್ನು ಶಾಶ್ವತವಾಗಿ ಬೆಳಗಲಿ. ಪ್ರತಿಯೊಬ್ಬರಿಗೂ ಸಂತಸ, ಯಶಸ್ಸು, ಆಯುರಾರೋಗ್ಯವನ್ನು ಭಗವಂತ ಕರುಣಿಸಲಿ. ಎಲ್ಲೆಡೆ ಸುಖ ಶಾಂತಿ ನೆಲೆಸಲಿ ಎಂದು ಹಾರೈಸುತ್ತೇನೆ.

Related Article

ಸುಧಾ ಮೂರ್ತಿಯವರ ಹೊಸ ಪುಸ್ತಕ, ಮಕ್ಕಳಿಗೆ ದೀಪಾವಳಿ ಉಡುಗೊರೆ

ದೀಪಾವಳಿ ಸಡಗರ: ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸಿ- ಕೇಂದ್ರ ಸರ್ಕಾರ

ದೀಪಾವಳಿಗೂ ಮುನ್ನ ಹೀನ ಕೃತ್ಯ - ಪಾಕ್ ನಲ್ಲಿ ಹಿಂದೂ ದೇವಾಲಯ ದರೋಡೆ!

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ

ದೀಪಾವಳಿಯ ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಾಲಯಗಳಲ್ಲಿ ಗೋಪೂಜೆ: ರಾಜ್ಯ ಸರ್ಕಾರದ ಆದೇಶ

ಕರಾವಳಿ ಭಾಗದಲ್ಲಿ ದೀಪಾವಳಿ ಆಚರಣೆಯತ್ತ ಒಂದು ನೋಟ..

ದೀಪಾವಳಿಯಲ್ಲಿ ಪಟಾಕಿ ನಿಷೇಧ ಹಿಂದೆ ಬೂಟಾಟಿಕೆ: ವೀರೇಂದ್ರ ಸೆಹ್ವಾಗ್

ದೀಪಾವಳಿಯಲ್ಲಿ ಸ್ಥಳೀಯತೆಗೆ ಒತ್ತು ಕೊಡಿ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಕರೆ

SCROLL FOR NEXT