ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬಗೆಹರಿದ ಅಮೆಜಾನ್ ಕಳ್ಳತನ ಪ್ರಕರಣ: 1.5 ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಕೋಲಾರ ಪೊಲೀಸರ ವಶಕ್ಕೆ

ಅಮೆಜಾನ್ ಸಂಸ್ಥೆಗೆ ಸೇರಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಲಾಗಿದ್ದ ಕ್ಯಾಂಟರ್ ವಾಹನ ನಾಪತ್ತೆಯಾಗಿದ್ದು, ವಾಹನದ ಚಾಲಕ ಈ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು.

ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೆಕ್ಕ ಕಿಶೋರ್ ಬಾಬು
Harshavardhan M
Updated On : 21 Nov 2021, 6:21 pm

ಕೋಲಾರ: ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೆಕ್ಕ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಕೋಲಾರ ಪೊಲೀಸರು ಅತಿ ದೊಡ್ಡ ವಂಚನೆ ಜಾಲವನ್ನು ಬಯಲಿಗೆಳೆದಿದ್ದು, 1.5 ಕೋಟಿ ರೂ.ಗೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಿಶೋರ್ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ, ಪ್ರತೀ ವರ್ಷ 4,000 ಪೊಲೀಸರ ನೇಮಕಕ್ಕೆ ನಿರ್ಧಾರ: ಸಚಿವ ಆರಗ ಜ್ಞಾನೇಂದ್ರ

ಅಕ್ಟೋಬರ್ 30ರಂದು ನಿಗೊ ಟ್ರಾವೆಲ್ಸ್ ಕಂಪನಿಯ ಮ್ಯಾನೇಜರ್ ಸುಧಾಕರ್ ಎಂಬುವವರು ಅಮೆಜಾನ್ ಸಂಸ್ಥೆಗೆ ಸೇರಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಲಾಗಿದ್ದ ಕ್ಯಾಂಟರ್ ವಾಹನ ನಾಪತ್ತೆಯಾಗಿದ್ದು, ವಾಹನದ ಚಾಲಕ ಈ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ದೂರು ನೀಡಿದ್ದರು. 

Advertisement

Advertisement

ಇದನ್ನೂ ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ 5.5 ಕೆಜಿ ಚಿನ್ನ ದರೋಡೆ

ಅಮೆಜಾನ್ ಸಂಸ್ಥೆಯ ಎಲೆಕ್ಟ್ರಾನಿಕ್ ವಸ್ತುಗಳ ಸಾಗಾಟದಲ್ಲಿ ನಿಗೊ ಟ್ರಾವೆಲ್ಸ್ ಸಂಸ್ಥೆ ಒಪ್ಪಂದ ಹೊಂದಿತ್ತು. ಕಾಣೆಯಾದ ಕ್ಯಾಂಟರ್ ಚಾಲಕ ಅಸ್ಸಾಂ ಮೂಲದವನಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಪ್ರವೃತ್ತರಾದರು. ಕ್ಯಾಂಟರ್ ಚಾಲಕ ಬತ್ರಲ್ ಹಕ್ ನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾದರು. ಆತನ ಬಳಿ ಕಳವಾಗಿದ್ದ ವಸ್ತುಗಳೂ ದೊರೆತವು. 

ಇದನ್ನೂ ಓದಿ: ದರೋಡೆಗೆ ಸಂಚು ರೂಪಿಸಿದ್ದವರ ಬಂಧನ; ಒಂದು ರಿವಾಲ್ವರ್, 6 ಜೀವಂತ ಗುಂಡುಗಳು ವಶ

ಸೂಪರಿಂಡೆಂಟ್ ಆಫ್ ಪೊಲೀಸ್ ಕಿಶೋರ್ ಬಾಬು ಮತ್ತು ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಸೆಂಟ್ರಲ್ ರೇಂಜ್ ಐಜಿಪಿ ಎಂ. ಚಂದ್ರಶೇಖರ್, ಪೊಲೀಸರ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ: ಸಂಗೀತ ನಿರ್ದೇಶಕ ಕಿರಣ್ ಸ್ಟುಡಿಯೋದಲ್ಲಿ ದರೋಡೆ, 35 ಲಕ್ಷ ರೂ. ಮೌಲ್ಯದ ಸ್ವತ್ತು ಕಳವು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments