ರಾಜ್ಯ

ಬೆಂಗಳೂರು ಮೆಟ್ರೋ ಅರ್ಧವಾರ್ಷಿಕ ಆದಾಯ ಕಳೆದ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚಳ: ವರದಿ

Srinivasamurthy VN

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದಾಗಿ ಭಾರೀ ಪ್ರಮಾಣದ ಹೊಡೆತಕ್ಕೊಳಗಾಗಿದ್ದ, ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮತ್ತೆ ಚೇತರಿಸಿಕೊಂಡಿದೆ.

ಹೌದು.. ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಆದಾಯ ಮತ್ತು ಪ್ರಯಾಣಿಕರ ಸಂಖ್ಯೆ ಎರಡರಲ್ಲೂ ಚೇತರಿಸಿಕೊಂಡಿದ್ದು, 2021-2022 ಹಣಕಾಸು ವರ್ಷದ ಆರ್ಧವಾರ್ಷಿಕ ಆದಾಯವು ನಾಲ್ಕು ಪಟ್ಟು ಹೆಚ್ಚಳವನ್ನು ತೋರಿಸಿದೆ.  

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಿಎಂಆರ್ ಸಿಎಲ್ 2020 ರಲ್ಲಿ ಆರು ತಿಂಗಳಿಂದ (ಮಾರ್ಚ್ 21 ರಿಂದ ಸೆಪ್ಟೆಂಬರ್ 6 ರವರೆಗೆ) ಕಾರ್ಯಾಚರಣೆಯನ್ನು 2021 ರಲ್ಲಿ ಮೂರು ತಿಂಗಳು (ಏಪ್ರಿಲ್ 28 ರಿಂದ ಜೂನ್ 20 ರವರೆಗೆ) ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು. ಬಳಿಕ ಕಾರ್ಯಾಚರಣೆ ಆರಂಭವಾಯಿತಾದರೂ ಇದು ನಿರ್ಬಂಧಿತ ಗಂಟೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸಿತು. ಕಳೆದ ವಾರವಷ್ಟೇ ದಿನಕ್ಕೆ ನಮ್ಮ ಮೆಟ್ರೋ 17.5 ಗಂಟೆಗಳ ಕಾಲ ರೈಲು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.  ಪರಿಣಾಮ ನಮ್ಮ ಮೆಟ್ರೋ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಈ ಬಗ್ಗೆ ಮಾತನಾಡಿರುವ BMRCL ನ ಉನ್ನತ ಅಧಿಕಾರಿಯೊಬ್ಬರು, 'ರೈಲು ಕಾರ್ಯಾಚರಣೆಯ ಆದಾಯ ಕಳೆದ ವರ್ಷದ ಇದೇ ಅವಧಿಯಲ್ಲಿ 15.66 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್‌ಗೆ 57.81 ಕೋಟಿ ರೂ ಆದಾಯ ಸಂಗ್ರಹವಾಗಿದೆ. ಇದು ನಾಲ್ಕು ಪಟ್ಟು ಹೆಚ್ಚಳವಾಗಿದ್ದು, BMRCL ಈಗ ಕಾರ್ಯಾಚರಣೆಯ ಆದಾಯದಲ್ಲಿನ ಭಾರೀ ಕುಸಿತದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ. ಮುಂದಿನ ಆರರಿಂದ ಎಂಟು ತಿಂಗಳೊಳಗೆ ಕಾರ್ಯಾಚರಣೆಯ ಲಾಭಾಂಶ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಯಾಣಿಕರ ಪ್ರವೃತ್ತಿ ಕ್ರಮೇಣ ಆರೋಗ್ಯಕರವಾಗುತ್ತಿದ್ದು, ಕಳೆದ ಒಂದು ವಾರದಲ್ಲಿ, ಸರಾಸರಿ ಪ್ರಯಾಣಿಕರ ಸಂಖ್ಯೆ ದಿನಕ್ಕೆ 3 ಲಕ್ಷ ಪ್ರಯಾಣಿಕರಷ್ಟಾಗಿದೆ. ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 5.26 ಲಕ್ಷ ಆಗಿತ್ತು. ಬಿಎಂಆರ್‌ಸಿಎಲ್‌ನ ಒಟ್ಟು ಸಾಲವು 25,481 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ರಾಜ್ಯ ಮತ್ತು ಕೇಂದ್ರ ಎರಡೂ ಸಾಲ ನೀಡಿದ್ದ ಬಡ್ಡಿ ರಹಿತ ಸಾಲವನ್ನು ಅರ್ಧವಾರ್ಷಿಕ ಬ್ಯಾಲೆನ್ಸ್ ಶೀಟ್ ಬಹಿರಂಗಪಡಿಸುತ್ತದೆ. ಇದರ ಜೊತೆಗೆ 10,892 ಕೋಟಿ ರೂ.ಗಳ ಮಾಲೀಕರ ಈಕ್ವಿಟಿ (ಮಾಲೀಕರ ಪಾಲು) ಇದ್ದು, ಸಾಕಷ್ಟು ಹಣ ಲಭ್ಯವಿದೆ ಮತ್ತು ನಮ್ಮ ಯೋಜನೆಗಳಿಗೆ ಯಾವುದೇ ಹಣಕಾಸಿನ ಸಮಸ್ಯೆಗಳಿಲ್ಲ ಎಂದು ಅವರು ವಿವರಿಸಿದರು.

ಇನ್ನು ನಮ್ಮ ಮೆಟ್ರೋ ಹಂತ-II ಗಾಗಿ ಆರ್ಥಿಕ ವೆಚ್ಚದ ಅಂದಾಜು 26,485 ಕೋಟಿ ರೂ.ಗಳಾಗಿದ್ದು, ಹಂತ 2A (ಔಟರ್ ರಿಂಗ್ ರೋಡ್ ಲೈನ್) ಮತ್ತು ಹಂತ 2B (ವಿಮಾನ ನಿಲ್ದಾಣ ಮಾರ್ಗ) ಗಾಗಿ ಹೆಚ್ಚುವರಿ 14,788 ಕೋಟಿ ರೂ. ಹಂತ-1 BMRCL 13,485 ಕೋಟಿ ರೂ ಗಳಾಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
 

SCROLL FOR NEXT