ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ 
ರಾಜ್ಯ

ಬೆಂಗಳೂರು: ಶಾಸಕರು, ಪಾಲಿಕೆ ಮುಖ್ಯಸ್ಥರಿಂದ ರಸ್ತೆ ಕಾಮಗಾರಿ ಪರಿಶೀಲನೆ

ಶಾಸಕ ಎಂ ಕೃಷ್ಣಪ್ಪ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು: ಶಾಸಕ ಎಂ ಕೃಷ್ಣಪ್ಪ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಕಾಮಗಾರಿ ಪರಿಶೀಲನೆ ಬಳಿಕ ಸಮನ್ವಯ ಸಮಸ್ಯೆಗಳನ್ನು ಪರಿಹರಿಸಲು ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್'ಬಿ, ಬಿಎಂಆರ್'ಸಿಎಲ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ತಳಮಟ್ಟದಲ್ಲಿ ಸಮಸ್ಯೆಗಳನ್ನು ಬಗರೆಹರಿಸಿಕೊಂಡು ಕೆಲಸ ಮಾಡುವಂಚೆ ಗಾದೂ ರಸ್ತೆ ದುರಸ್ತಿ ಕಾಮಗಾರಿ, ಗುಂಡಿಗಳ ಮುಚ್ಚುವುದು ಹಾಗೂ ಇತರೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ, ವಾರ್ಡ್ ಮಟ್ಟದಲ್ಲಿ ಎಲ್ಲೆಲ್ಲಿ ನೀರು ಮತ್ತು ಒಳಚರಂಡಿ ಕಾಮಗಾರಿಗಳು ಪೂರ್ಣಗೊಂಡರೂ ಬಿಡಬ್ಲ್ಯೂಎಸ್ಎಸ್'ಬಿಗೆ ಸಾಕ್ಷಿ ಸಮೇತ ಬಿಬಿಎಂಪಿಗೆ ವರದಿ ಸಲ್ಲುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಎಂ.ಕೃಷ್ಣಪ್ಪ, ವಲಯ ಆಯುಕ್ತರು ಡಾ. ಹರೀಶ್ ಕುಮಾರ್, ಜಂಟಿ ಆಯುಕ್ತರು ರಾಮಕೃಷ್ಣ, ಬೆಸ್ಕಾಂ, ಜಲಮಂಡಳಿ, ಮೆಟ್ರೋ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT