ರಾಜ್ಯ

ರಾಜ್ಯ ಶಿಕ್ಷಣ ರಾಯಭಾರಿಯಾಗಿ ಮಹತ್ವಪೂರ್ಣ ಹೊಣೆ ನಿರ್ವಹಿಸಿದ್ದ ಪುನೀತ್ ರಾಜ್ ಕುಮಾರ್

Harshavardhan M

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಅಪ್ಪು, ಪುನೀತ್ ರಾಜ್ ಕುಮಾರ್ ಶಿಕ್ಷಣ ರಾಯಭಾರಿಯಾಗಿ, ಯೂತ್ ಐಕಾನ್ ಆಗಿ ನಮ್ಮ ನಡುವೆ ಹಲವು ನೆನಹುಗಳನ್ನು ಬಿಟ್ಟು ಹೋಗಿದ್ದಾರೆ. ಮಕ್ಕಳ ಶಿಕ್ಷಣ ಹಕ್ಕುಗಳ ರಾಯಭಾರಿಯಾಗಿ ಪುನೀತ್, ''ಎಜುಕೇಶನ್ ಈಸ್ ಪವರ್'' ಅಭಿಯಾನದಲ್ಲಿ ಪುನೀತ್ ಕಾರ್ಯ ನಿರ್ವಹಿಸಿದ್ದಾರೆ. 

ಈ ಅಭಿಯಾನದಲ್ಲಿ ಪುನೀತ್ ಜೊತೆ ಕಾರ್ಯನಿರ್ವಹಿಸಿದ್ದ ಶಿಕ್ಷಣತಜ್ನ ನಿರಂಜನಾರಾಧ್ಯ ಅವರು ಪುನೀತ್ ಅಗಲಿಕೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮಕ್ಕಳಲ್ಲಿ ಶಿಕ್ಷಣದ ಮಹತ್ವ ಪಸರಿಸುವಲ್ಲಿ ಪುನೀತ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪುನೀತ್ ಅಗಲಿಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಐಟಿಐ ಕಾಲೇಜುಗಳ ಹೆಚ್ಚಳಕ್ಕೆ ಪುನೀತ್ ಯಾವ ರೀತಿ ಬೆಂಬಲ ನೀಡಿದರು ಎನ್ನುವುದನ್ನು ಹಂಚಿಕೊಂಡಿದ್ದಾರೆ.

ಐಟಿಐ ಕಾಲೇಜುಗಳಿಂದ ಗ್ರಾಮೀಣ ಭಾಗದ ಮಕ್ಕಳು ಉದ್ಯೋಗ ಖಾತರಿಯನ್ನು ಹೊಂದುತ್ತಾರೆ, ಹೀಗಾಗಿ ಅವರನ್ನು ಐಟಿಐ ಕಾಲೇಜುಗಳ ಸೆಳೆಯುವುದು ನನ್ನ ಕರ್ತವ್ಯ ಎಂದು ಪುನೀತ್ ಹೇಳಿದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ.

ತಮ್ಮ ಶೈಕ್ಷಣಿಕ ಅರ್ಹತೆ ಬಗೆಗಿನ ಪ್ರಶ್ನೆಗಳನ್ನು ಮುಜುಗರದಿಂದ ಅವಾಯ್ಡ್ ಮಾಡುತ್ತಿದ್ದ ಪುನೀತ್ ರಾಜ್ ಕುಮಾರ್ ಮಕ್ಕಳ ಶಿಕ್ಷಣದ ವಿಚಾರಕ್ಕೆ ಬಂದಾಗ, ಶಿಕ್ಷಣದ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರು.. ರಾಜ್ಯ ಶಿಕ್ಷಣ ಅಭಿಯಾನದ ರಾಯಭಾರಿಯಾಗಿ ಅವರು ಹಲವು ಉತ್ತಮ ಕೆಲಸಗಳಲ್ಲಿ ಭಾಗಿಯಾಗಿದ್ದರು.

SCROLL FOR NEXT