ರಾಜ್ಯ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸುತುವೆಯಲ್ಲಿ ಬಿಎಂಟಿಸಿ ಬಸ್ ಹರಿದು ಇಬ್ಬರು ದುರ್ಮರಣ

Nagaraja AB

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಹರಿದು ಒಬ್ಬರು ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಪ್ರಭಾಕರ್ ಮತ್ತು ಗಾರ್ಮೆಂಟ್ಸ್ ಉದ್ಯೋಗಿ ಸಹನಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ದಾವಣಗೆರೆಯಿಂದ ಬಂದಿದ್ದರು. ವಯಸ್ಸು ಸುಮಾರು 25 ವರ್ಷವಾಗಿತ್ತು. ಪ್ರಭಾಕರ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ,  ಸಹನಾ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದರು.

ಭಾನುವಾರ ಸಹನಾ ಪ್ರಭಾಕರ್ ಅವರನ್ನು ಭೇಟಿಯಾಗಲು ಬಂದಿದ್ದರು. ಅವರಿಬ್ಬರು ಎಲೆಕ್ಟ್ರಾನಿಕ್ ಸಿಟಿಯ ಹಂತ-2 ರಿಂದ ಹಂತ -1 ಕ್ಕೆ ಸಂಪರ್ಕಿಸುವ ಫ್ಲೈಓವರ್ ಮೇಲೆ ಹೋಗುತ್ತಿದ್ದಾಗ ಮುಂದೆ ಸಾಗುತ್ತಿದ್ದ ಬಿಎಂಟಿಸಿ ಬಸ್ ಯಾವುದೇ ಸೂಚನೆ ಇಲ್ಲದೆ ಮಾರ್ಗ ಬದಲಿಸಿ ಮಧ್ಯದಲ್ಲಿದ್ದ ಬೈಕ್ ಗೆ ಗುದಿದ್ದೆ. ಇದರಿಂದಾಗಿ ಪ್ರಭಾಕರ್ ಮತ್ತು ಸಹನಾ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ನಂತರ ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಪ್ರಕರಣ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಬಸ್ ನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ ಪೊಲೀಸರು, ಇತ್ತೀಚಿಗೆ ಕಾರೊಂದು ಡಿಕ್ಕಿ ಹೊಡೆದು ಮಹಿಳೆ. ಪುರುಷನೊಬ್ಬ ಇದೇ ಮೇಲ್ಸುತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದನ್ನು ನೆನಪಿಕೊಂಡರು.

SCROLL FOR NEXT