ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.
ನೆರೆಮನೆಯವರನ್ನು ದೂರಿರುವ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ.
ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಮಗು ನಿದ್ರೆಯಿಂದ ಎದ್ದುಬಿಡ್ತಾನೆ ಎಂದು ದೂರಿದ್ದಾನೆ.
ಪಕ್ಕದ ಮನೆಯವರು ಸಾಕಿರುವ ಹುಂಜಗಳು ಕೂಗುವುದರಿಂದ ನಿತ್ಯವೂ ತೊಂದರೆ ಆಗುತ್ತಿದೆ’ ಎಂದು ಉತ್ತರ ಭಾರತದ ವ್ಯಕ್ತಿಯೊಬ್ಬರು ಇ–ಮೇಲ್ ಮೂಲಕ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.