ಬೆಂಗಳೂರಿನಲ್ಲಿ ಆರಂಭಗೊಂಡ ಜಾಗತಿಕ ಆರ್ಥಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡಿದರು 
ರಾಜ್ಯ

ಜಗತ್ತು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸಿದರೂ, ಭಾರತ ಸಮರ್ಥವಾಗಿ ಎದುರಿಸಿದೆ: ಪ್ರಧಾನಿ ಮೋದಿ

ಆರ್ಥಿಕ ಹಿಂಜರಿತ ಮತ್ತು ಇತರ ಅನಿಶ್ಚಿತತೆಗಳನ್ನು ಜಗತ್ತು ಎದುರಿಸುತ್ತಿರುವಾಗ, ಭಾರತವು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರರ ಸಮಾವೇಶ (GIM) ದಲ್ಲಿ ಹೇಳಿದ್ದಾರೆ.

ಬೆಂಗಳೂರು: ಆರ್ಥಿಕ ಹಿಂಜರಿತ ಮತ್ತು ಇತರ ಅನಿಶ್ಚಿತತೆಗಳನ್ನು ಜಗತ್ತು ಎದುರಿಸುತ್ತಿರುವಾಗ, ಭಾರತವು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರರ ಸಮಾವೇಶ(GIM)ದಲ್ಲಿ ಹೇಳಿದ್ದಾರೆ.  ಅವರು ನಿನ್ನೆ ಬೆಂಗಳೂರಿನಲ್ಲಿ ಆರಂಭವಾದ ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ಘಾಟನೆ ಬಳಿಕ ವರ್ಚುವಲ್ ಭಾಷಣ ಮಾಡಿದರು. 

ಇಂದು ಜಗತ್ತು ಆರ್ಥಿಕ ಬಿಕ್ಕಟ್ಟಿನಲ್ಲಿದೆ, ಆದರೆ ತಜ್ಞರು ಭಾರತವನ್ನು ಪ್ರಕಾಶಮಾನವಾದ ಭರಸವೆಯ ತಾಣ ಎಂದು ಬಣ್ಣಿಸಿದ್ದಾರೆ ಎಂದು ಕೂಡ ಮೋದಿ ಹೇಳಿದರು. ಕಳೆದ ವರ್ಷ, ಭಾರತವು ದಾಖಲೆಯ FDI (ವಿದೇಶಿ ನೇರ ಹೂಡಿಕೆ)  84 ಶತಕೋಟಿ ಡಾಲರ್ ಗೆ ಸಾಕ್ಷಿಯಾಗಿದೆ. ನಮ್ಮ ಆರ್ಥಿಕತೆಯು ಬಲಗೊಳ್ಳಲು ನಮ್ಮ ಮೂಲಭೂತ ಅಂಶಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.

ಹೂಡಿಕೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಸಂಕೀರ್ಣ ಕಾನೂನುಗಳನ್ನು ಮಾಡುವ ಬದಲು, ಹೂಡಿಕೆದಾರರನ್ನು ವ್ಯಾಪಕವಾಗಿ ತಲುಪಲು ತರ್ಕಬದ್ಧಗೊಳಿಸುವ ಅವಶ್ಯಕತೆಯಿದೆ ಎಂದರು.

ಹೊಸ ಭಾರತವನ್ನು ದಿಟ್ಟ ಸುಧಾರಣೆಗಳು, ದೊಡ್ಡ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಗಳ ಮೂಲಕ ಮಾತ್ರ ನಿರ್ಮಿಸಬಹುದು. ಈಗ ಜಗತ್ತು ಉದ್ಯಮ ವಲಯ 4.0 ಕಡೆಗೆ ಚಲಿಸುತ್ತಿರುವಾಗ, ಭಾರತದ ಯುವ ಪ್ರತಿಭೆಗಳು 100ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಸ್ಥಾಪಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ, ದೇಶವು 80 ಸಾವಿರ ಸ್ಟಾರ್ಟಪ್‌ಗಳನ್ನು ಆಯೋಜಿಸಿದೆ. ಪ್ರತಿಭೆ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದರೆ, ಪ್ರತಿಯೊಬ್ಬರ ಮನಸ್ಸಿನಲ್ಲಿ ಮೊದಲನೆಯದು ‘ಬ್ರ್ಯಾಂಡ್ ಬೆಂಗಳೂರು’. ಕರ್ನಾಟಕವು ‘ಡಬಲ್ ಇಂಜಿನ್’ ಶಕ್ತಿಯನ್ನು ಹೊಂದಿದೆ ಎಂದರು. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯಕ್ರಮದಲ್ಲಿ ಮಾತನಾಡಿ, ಖಂಡಿತವಾಗಿಯೂ ದೇಶದ ಆರ್ಥಿಕತೆ ವಿಚಾರದಲ್ಲಿ ಅನಿಶ್ಚಿತತೆ ಮತ್ತು ಸವಾಲಿನ ಪ್ರಜ್ಞೆ ಇದೆ. ಆದರೆ ಅದು ಭಾರತಕ್ಕೆ ಮಾತ್ರ ಅಲ್ಲ. ಪ್ರಪಂಚದಾದ್ಯಂತ ಪ್ರತಿ ದೇಶವು ಇದನ್ನು ಅನುಭವಿಸುತ್ತಿದೆ. ಎಲ್ಲರೂ ಭಾರೀ ಹಿಂಜರಿತದ ಮೂಲಕ ಹೋಗುತ್ತಿದ್ದಾರೆ. ತಾಂತ್ರಿಕವಾಗಿ, ನಾವು ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿದ್ದೇವೆ, ಇನ್ನೂ ಪರಿಸ್ಥಿತಿಯಿಂದ ಹೊರಬಂದಿಲ್ಲ ಎಂದರು. 

ಕೋವಿಡ್ -19 ಸಾಂಕ್ರಾಮಿಕದ ಎರಡು ಭಯಾನಕ ವರ್ಷಗಳು, ನಂತರ ಉಕ್ರೇನ್‌ನಲ್ಲಿ ಯುದ್ಧವು ವಿಶ್ವ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿತು. ಇಂದು UK ಯಲ್ಲಿ ಕಂಡುಬರುವಂತೆ ಹಲವಾರು ಅಭಿವೃದ್ಧಿ ಹೊಂದಿದ ಆರ್ಥಿಕ ಹಿಂಜರಿತವನ್ನು ಕಾಣುತ್ತಿದೆ ಎಂದರು. 

ಕೇಂದ್ರದ ನೀತಿಗಳು ಕರ್ನಾಟಕದಲ್ಲಿ ಪ್ರತಿಫಲ
ಕಳೆದ ತಿಂಗಳು, ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿ ಇಂಗ್ಲೆಂಡ್ ನ್ನು ಹಿಂದಿಕ್ಕಿದೆ. 2029 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಅದರಂತೆ, ದೇಶವು ಹೂಡಿಕೆಯತ್ತ ಗಮನಹರಿಸುತ್ತದೆ. ಜಾಗತಿಕವಾಗಿ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತದೆ.

ಅನಿಶ್ಚಿತತೆ ನಡುವೆ, ಕೈಗಾರಿಕೆಗಳು ಚೀನಾ ಮತ್ತು ಯುರೋಪ್‌ನಂತಹ ಸ್ಥಳಗಳಿಂದ ಹೊರಬರುತ್ತಿರುವಾಗ, ಆರ್ಥಿಕ ಪ್ರಶಸ್ತ ಸ್ಥಳವಾಗಿ ಭಾರತ ಹೊಮ್ಮುತ್ತಿದೆ. ಕರ್ನಾಟಕವು ಒಂದು ಆದರ್ಶ ಹೂಡಿಕೆಯ ತಾಣವಾಗಿದೆ. ಆರ್ಥಿಕತೆಯು ಈಗ ಹೂಡಿಕೆದಾರರಿಗೆ ಬಹಳ ಆಕರ್ಷಕವಾಗಿದೆ. ಕರ್ನಾಟಕವು ಕೇಂದ್ರದ ನೀತಿಗಳನ್ನು ಎಚ್ಚರಿಕೆಯಿಂದ ನೋಡುತ್ತಿದೆ. ನೀತಿ-ನಿರೂಪಣೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೋಡಲಾಗುತ್ತಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವ ಈ ಸಂದರ್ಭದಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ಹೂಡಿಕೆಗಳನ್ನು ಅಂದಾಜಿಸಲಾಗಿತ್ತು.

ಇಂದು, ಅದು ಸುಮಾರು 7.5 ಲಕ್ಷ ಕೋಟಿ ರೂಪಾಯಿಗಳಿಗೆ  ಏರಿಕೆಯಾಗಿದೆ, ಅದರಲ್ಲಿ ಮುಖ್ಯಮಂತ್ರಿಗಳು ಈಗಾಗಲೇ 2.8 ಲಕ್ಷ ಕೋಟಿ ಮೌಲ್ಯದ ಪ್ರಸ್ತಾವನೆಗಳನ್ನು ತೆರವುಗೊಳಿಸಿದ್ದಾರೆ. ಎಂಒಯುಗಳಿಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗುತ್ತಿದೆ. ಮೂಲ ಗುರಿಯ ಆಧಾರದ ಮೇಲೆ ಶೇಕಡಾ 50ಕ್ಕಿಂತ ಹೆಚ್ಚು ಎಂಒಯುಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT