ಕಂದಾಯ ಸಚಿವ ಆರ್ ಅಶೋಕ್ 
ರಾಜ್ಯ

ಸದನ ಸ್ವಾರಸ್ಯ: ಅಶೋಕ್ ನೀನು ಕಬಡ್ಡಿ ಆಡ್ತಿದ್ದೆ ಅಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ- ಅಶೋಕ್ ನಡುವೆ ಸ್ವಾರಸ್ಯಕರವಾದ ಮಾತುಕತೆ ನಡೆಯಿತು.

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ- ಅಶೋಕ್ ನಡುವೆ ಸ್ವಾರಸ್ಯಕರವಾದ ಮಾತುಕತೆ ನಡೆಯಿತು.

ವಿಧಾನಸಭೆಯಲ್ಲಿ ಮಳೆ ಹಾನಿ ಕುರಿತಾಗಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಂತಹದೊಂದು ಸ್ವಾರಸ್ಯಕರ ಮಾತುಕತೆ ನಡೆಯಿತು.

ಮಳೆಯಿಂದ ಒಟ್ಟು 24 ಸಾವಿರ ಮನೆಗಳು ಹಾನಿಗೀಡಾಗಿವೆ. 7647 ಕೋಟಿ 13 ಲಕ್ಷ ನಷ್ಟ ಹೇಳಿದ್ದೀರಿ. ಎಸ್ ಡಿ ಆರ್ ಎಫ್ ನಾರ್ಮ್ಸ್ ಪ್ರಕಾರ 1012 ಕೋಟಿ 50 ಲಕ್ಷ ಕೇಂದ್ರದ ಬಳಿ ಪರಿಹಾರ ಕೇಳಿದ್ದೀರಿ. ಆದರೆ ಕೇಂದ್ರ ಇಲ್ಲಿಯವರೆಗೂ ಒಂದೇ ಒಂದು ಪೈಸೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಎದ್ದು ನಿಂತರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅಶೋಕ್ ನಿಲ್ಲಬೇಡಿ, ಯಾಕೆ ವ್ಯಾಯಾಮ ಮಾಡ್ತೀರಿ? ನಿನ್ನ ಎನರ್ಜಿ ಚೆನ್ನಾಗಿ ಇದೆ. ನೀನು ದೈಹಿಕವಾಗಿ ಗಟ್ಟಿ ಇದ್ದೀಯಾ, ಕಬಡ್ಡಿ ಆಡ್ತಿದ್ದೆ ಅಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದಕ್ಕೆ ಮರುತ್ತರ ನೀಡಿದ ಸಚಿವ ಅಶೋಕ್, ಹೌದು 20 ವರ್ಷ ಆಡಿದ್ದೇನೆ ಎಂದರು. '"ನಾನು ಹೈಸ್ಕೂಲ್ ದಿನದಲ್ಲಿ ಆಡುತ್ತಿದ್ದೆ. ಆಮೇಲೆ ಬಿಟ್ಟೆ. ಆಮೇಲೆ ಆಡೋಕೆ ಆಗ್ಲೆ ಇಲ್ಲ. ಈಗ ಯಾವ ಆಟ ಆಡೋಕು ಆಗೋದಿಲ್ಲ ಎಂದರು ಸಿದ್ದರಾಮಯ್ಯ. ಕಬ್ಬಡಿ ಆಡಿದರೆ ಶುಗರ್ ಬಿಪಿ ಬರಲ್ಲ ಸರ್ ಎಂದು ಆರ್. ಅಶೋಕ್ ಉತ್ತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

ಪಶ್ಚಿಮ ಏಷ್ಯಾ ಯುದ್ಧದ ಪರಿಸ್ಥಿತಿ ನಿರ್ವಹಣೆ: ಮೋದಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ; ಪಕ್ಷಕ್ಕೆ ತೀವ್ರ ಮುಜುಗರ!

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಚೀನಾದ ಹಸ್ತಕ್ಷೇಪ: ಪನಾಮ ಧ್ವಜದ ಹಡಗುಗಳಿಗೆ ತಡೆ, ಸಿಡಿದೆದ್ದ ಅಮೆರಿಕ!

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

IPL 2026: RCB ವಿರುದ್ಧದ ಹೈ-ವೋಲ್ಟೇಜ್‌ ಪಂದ್ಯಕ್ಕೂ ಮೊದಲೇ ಧೋನಿ ಕಮ್‌ಬ್ಯಾಕ್‌?

SCROLL FOR NEXT