ಸಾಂದರ್ಭಿಕ ಚಿತ್ರ 
ರಾಜ್ಯ

ದಕ್ಷಿಣ ಕನ್ನಡ: ಅಪರಿಚಿತ ಮಹಿಳೆಯೊಂದಿಗಿರುವ ಬಿಜೆಪಿ ಶಾಸಕರ ಖಾಸಗಿ ಫೋಟೊಗಳು ವೈರಲ್!

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಶಾಸಕರೊಬ್ಬರು ಅಪರಿಚಿತ ಮಹಿಳೆಯೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದಕ್ಷಿಣ ಕನ್ನಡ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಶಾಸಕರೊಬ್ಬರು ಅಪರಿಚಿತ ಮಹಿಳೆಯೊಂದಿಗೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮೇ 10 ರಂದು ನಡೆಯಲಿರುವ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗುವ ಬೆಳವಣಿಗೆ ಇದೀಗ ವರದಿಯಾಗಿದೆ.

ಆಪಾದಿತ ಫೋಟೋಗಳು ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ್ ಮಠಂದೂರು ಅವರದ್ದು ಎನ್ನಲಾಗಿದೆ. ಶಾಸಕರಿಗೆ ಟಿಕೆಟ್ ನಿರಾಕರಿಸುವಂತೆ ಪಕ್ಷದ ಮೇಲೆ ಒತ್ತಡ ಹೇರಲು ಬಿಜೆಪಿಯಲ್ಲಿನವರದ್ದೇ ಕೈವಾಡವಿದೆ ಎಂದು ಮೂಲಗಳು ತಿಳಿಸಿವೆ.

ಅವರ ವಿರುದ್ಧ ತೀವ್ರ ಲಾಬಿ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಕೂಡ ಈ ಸ್ಥಾನವನ್ನು ಸೆಣಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ. 

ಶಾಸಕ ಮಠಂದೂರು ಅವರು ಈ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆ ಖಾಸಗಿ ವಿಡಿಯೋವೊಂದರ ಬಗ್ಗೆ ಶಾಸಕರ ಬಗ್ಗೆ ವದಂತಿ ಹಬ್ಬಿತ್ತು. ಮಠಂದೂರು ಉತ್ತಮ ಕೆಲಸ ಮಾಡಿದರೂ ಪಕ್ಷದೊಳಗೆ ಹಲವು ಶತ್ರುಗಳನ್ನು ಹುಟ್ಟು ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಆಘಾತದಿಂದ ಬಿಜೆಪಿ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಈ ಇತ್ತೀಚಿನ ಬೆಳವಣಿಗೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗಾಗಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್, video!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

Toxic Trailer: ಹಿರೋಯಿನ್ ಎದುರು ಯಶ್ ಬೆತ್ತಲೆ ಸೀನ್ ನೋಡಿ ಅಭಿಮಾನಿಗಳು ದಂಗು; ಬಾಕ್ಸ್ ಆಫೀಸ್ ನಲ್ಲಿ 3000 ಕೋಟಿ ಫಿಕ್ಸ್ ಎಂದ ಫ್ಯಾನ್ಸ್!

Video: ಮತ್ತೊಂದು ಗ್ಯಾಸ್ ಬಲೂನ್ ದುರಂತ: ಸಿಲಿಂಡರ್ ಸ್ಫೋಟ, 4 ಮಂದಿಗೆ ಗಾಯ, ಸ್ಥಳದಲ್ಲಿ ಆತಂಕ