ರಾಜ್ಯ

ಹೈಡ್ರೋಜನ್ ಇಂಧನ ಬಳಕೆಗೆ ಹಸಿರು ಕಾರಿಡಾರ್ ಪ್ರದೇಶ ಹೆಚ್ಚಿಸಲು ಸರ್ಕಾರ ಒಲವು

Sumana Upadhyaya

ಬೆಂಗಳೂರು: ಹೈಡ್ರೋಜನ್ ಶಕ್ತಿಗಾಗಿ ಹಸಿರು ಇಂಧನ ಕಾರಿಡಾರ್ ಪ್ರದೇಶವನ್ನು ಹೆಚ್ಚಿಸಲು, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು ಮತ್ತು ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆ ತಗ್ಗಿಸಲು ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. 

ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಇಂಧನ ಇಲಾಖೆಯು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸೋಲಾರೈಸೇಶನ್ ಪ್ರದೇಶವು(ಸೌರ ವಿದ್ಯುದ್ದೀಕರಣ ಸಂಪರ್ಕ) ಹೆಚ್ಚಿದೆ ಮತ್ತು ಸರ್ಕಾರವು 768 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಬಿಡ್‌ಗಳನ್ನು ತೆರಿದಿದೆ ಎಂದು ವಿವರಿಸಿದ್ದಾರೆ. 

ಹಸಿರು ಶಕ್ತಿಗಾಗಿ ಪ್ರತ್ಯೇಕವಾಗಿ ಪ್ರಸರಣ ಮಾರ್ಗಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಯೋಜನೆ ಇದೆ, ಸಚಿವಾಲಯದಿಂದ ಭಾಗಶಃ ಹಣ ನೀಡಲಾಗುತ್ತದೆ. ಇದು ಹೊಸದಲ್ಲ. ಈ ಯೋಜನೆ ನಡೆಯುತ್ತಲೇ ಬಂದಿದೆ. ಕರ್ನಾಟಕವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಾರಣ ಮತ್ತು ಇತರ ಹಸಿರು ಶಕ್ತಿಯ ಮೇಲೆ ಕೆಲಸ ಮಾಡುತ್ತಿರುವುದರಿಂದ, ಹೈಡ್ರೋಜನ್ ಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನ ಸಂಬಂಧಿತ ಯೋಜನೆಗಳಿಗೆ ಹಸಿರು ಶಕ್ತಿ ಕಾರಿಡಾರ್‌ಗೆ ಹೆಚ್ಚಿನ ಪ್ರದೇಶವನ್ನು ನಿಗದಿಪಡಿಸುವಂತೆ ರಾಜ್ಯವು ಕೇಳಿದೆ. ಹೈಡ್ರೋಜನ್ ಶಕ್ತಿಯು ನವೀಕರಿಸಬಹುದಾದ ಶಕ್ತಿಯ ಭವಿಷ್ಯವಾಗಿದೆ ಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ಕೆಲಸ ಮಾಡುವುದರ ಜೊತೆಗೆ ಜಾಗತಿಕವಾಗಿಯೂ ಸಹ ಒಂದು ಹಂತವನ್ನು ಗಳಿಸಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. 

ಇದು ಗ್ರಿಡ್ ಮತ್ತು ಟ್ರಾನ್ಸ್‌ಮಿಷನ್ ನೆಟ್‌ವರ್ಕ್‌ನಂತೆ, ಉತ್ಪತ್ತಿಯಾಗುವ ಇಂಧನವನನು ಗ್ರಿಡ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಬಳಕೆ ಮತ್ತು ಅವಶ್ಯಕತೆಯ ಆಧಾರದ ಮೇಲೆ ಅದನ್ನು ಉಪಯೋಗಿಸಿ ನಂತರ ಮಾರಾಟ ಮಾಡಲಾಗುತ್ತದೆ. ಯಾವುದೇ ರಾಜ್ಯಕ್ಕೆ ವಿಶೇಷ ಹಂಚಿಕೆ ಇಲ್ಲ, ಆದರೆ ಬೇಡಿಕೆ ಮತ್ತು ಪೂರೈಕೆ ಚಾಲಿತವಾಗಿದೆ ಎಂದು ವಿವರಿಸಿದರು.

ಸರ್ಕಾರವು ಯಲಹಂಕ ಕಂಬೈನ್ಡ್ ಸೈಕಲ್ ಘಟಕದಿಂದ ಹಸಿರು ಇಂಧನ ಪಡೆಯುವ ಕೆಲಸ ಮಾಡುತ್ತಿದ್ದು, ಇನ್ನು ಆರು ತಿಂಗಳೊಳಗೆ ಕಾರ್ಯನಿರ್ವಹಿಸಲಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸೌರಶಕ್ತಿ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಸರ್ಕಾರವು 1,100 ಮೆಗಾ ವಾಟ್ ಹೈಬ್ರಿಡ್ ಸಾಮರ್ಥ್ಯ ಸೇರಿಸಲಾಗಿದೆ.

SCROLL FOR NEXT