ಪ್ರಧಾನಿ ಮೋದಿ ರೋಡ್ ಶೋ 
ರಾಜ್ಯ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ, ಜನಸಾಗರ!

ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದರು. ಚೆನ್ನಮ್ಮ ವೃತ್ತದಿಂದ  ಮಾಲಿನಿ ಸಿಟಿಯವರೆಗೂ ಸುಮಾರು 10.7 ಕಿ.ಮೀ. ದೂರದವರೆಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೋದಿ ರೋಡ್ ಶೋ ನಲ್ಲಿ ಪಾಲ್ಗೊಂಡರು.

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದರು. ಚೆನ್ನಮ್ಮ ವೃತ್ತದಿಂದ  ಮಾಲಿನಿ ಸಿಟಿಯವರೆಗೂ ಸುಮಾರು 10.7 ಕಿ.ಮೀ. ದೂರದವರೆಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೋದಿ ರೋಡ್ ಶೋ ನಲ್ಲಿ ಪಾಲ್ಗೊಂಡರು.

ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಹರ ಹರ ಮೋದಿ ಎಂಬ ಘೋಷಣೆ ಕೂಗಿ ಕಾರಿನ ಮೇಲೆ ಹೂ ಮಳೆ ಸುರಿದರು. ಕಟ್ಟಡಗಳ ಮೇಲೇರಿದ ಜನರು, ಬಿಜೆಪಿ ಭಾವುಟ ಪ್ರದರ್ಶಿಸುತ್ತಾ, ಮೋದಿ ಪರ ಜೈಕಾರ ಹಾಕಿ ಹರ್ಷೋದ್ಗಾರ ಮಾಡಿದರು.

ಕಾಲೇಜ್ ವೃತ್ತದಿಂದ  ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿವರೆಗೂ ರೋಡ್ ಶೋ ನಡೆಸಿದರು. ರೋಡ್ ಶೋ ಬಳಿಕ  ಬೃಹತ್ ಸಮಾವೇಶದಲ್ಲಿ ಮೋದಿ ಪಾಲ್ಗೊಂಡರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್: ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ; ನಿಖಿಲ್

ಮೊಬೈಲ್ ಪಾಸ್‌ವರ್ಡ್ ನಿನ್ನ ಹೆಂಡ್ತಿಗೆ ಕೊಡ್ತೀಯಾ? ಖಬರಸ್ಥಾನ ಆಸ್ತಿ ಬೇರೆಯವರಿಗೆ ವರ್ಗಾವಣೆಯಾಗಿದ್ದು ಹೇಗೆ; ಸಂಸದ ನಾಸೀರ್ ಹುಸೇನ್

SCROLL FOR NEXT