ನಾಟಕ ಪ್ರದರ್ಶನದ ವೇಳೆಯೇ ಹೃದಯಾಘಾತದಿಂದ ಸಾವಿಗೀಡಾದ ನಂಜಯ್ಯ 
ರಾಜ್ಯ

ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನದ ವೇಳೆ ಹೃದಯಾಘಾತ; ಕುಸಿದು ಬಿದ್ದು ಕಲಾವಿದರೊಬ್ಬರು ಸಾವು

ನಾಟಕ ಪ್ರದರ್ಶನ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದರೊಬ್ಬರು ಸಾವಿಗೀಡಾಗಿರುವ ಮನಕಲಕುವ ಘಟನೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಮಂಡ್ಯ: ನಾಟಕ ಪ್ರದರ್ಶನ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದರೊಬ್ಬರು ಸಾವಿಗೀಡಾಗಿರುವ ಮನಕಲಕುವ ಘಟನೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ದುಗ್ಗನಹಳ್ಳಿ ಗ್ರಾಮದ ಡಿ.ಎನ್. ನಂಜಯ್ಯ(41) ಎಂಬುವವರು ನಾಟಕ ಪ್ರದರ್ಶನದ ವೇಳೆಯೇ ಮೃತಪಟ್ಟಿದ್ದಾರೆ. ಇವರು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ಗ್ರಾಮದ ಬಸವನಗುಡಿಯಲ್ಲಿ ಶನಿವಾರ ‘ಶ್ರೀ ಕೃಷ್ಣ ಸಂಧಾನ’ ನಾಟಕದಲ್ಲಿ ನಂಜಯ್ಯ ಸೇರಿದಂತೆ ಸುಮಾರು 20 ಕಲಾವಿದರು ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ವೇಳೆ ವೇದಿಕೆಗೆ ಬಂದ ನಂಜಯ್ಯ ಅವರು, ಅಭಿನಯಿಸುತ್ತಿದ್ದಾಗಲೇ ಕುಸಿದು ಬಿದ್ದಿದ್ದಾರೆ.

ಈ ವೇಳೆ ಕೂಡಲೇ ಕಲಾವಿದರು ಹಾಗೂ ಗ್ರಾಮಸ್ಥರು ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟೊತ್ತಿಗಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ