ಕೆ ಜೆ ಜಾರ್ಜ್ 
ರಾಜ್ಯ

'ಗೃಹ ಜ್ಯೋತಿ'ಗೆ ಡೆಡ್ ಲೈನ್ ಇಲ್ಲ, ಆದರೆ ಮುಂದಿನ ತಿಂಗಳು ಫ್ರೀ ಸಿಗಲು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು: ಕೆ ಜೆ ಜಾರ್ಜ್

200 ಯೂನಿಟ್ ಒಳಗೆ ವಿದ್ಯುತ್ ಬಳಸುವ ರಾಜ್ಯದ ಎಲ್ಲಾ ನಾಗರಿಕರಿಗೂ ಈ ತಿಂಗಳಿನಿಂದ ಉಚಿತ ವಿದ್ಯುತ್ ದೊರಕಲಿದ್ದು ನಾಗರಿಕರು ಆದಷ್ಟು ಶೀಘ್ರ ಅರ್ಜಿ ಸಲ್ಲಿಸಿದರೆ ಒಳ್ಳೆಯದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

ಚಿಕ್ಕಮಗಳೂರು: 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ರಾಜ್ಯದ ಎಲ್ಲಾ ನಾಗರಿಕರಿಗೂ ಈ ತಿಂಗಳಿನಿಂದ ಉಚಿತ ವಿದ್ಯುತ್ ದೊರಕಲಿದ್ದು ನಾಗರಿಕರು ಆದಷ್ಟು ಶೀಘ್ರ ಅರ್ಜಿ ಸಲ್ಲಿಸಿದರೆ ಒಳ್ಳೆಯದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್(K J George) ತಿಳಿಸಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೃಹ ಜ್ಯೋತಿಗೆ(Gruha Jyothi) ಅರ್ಜಿ ಸಲ್ಲಿಸಲು ಡೆಡ್ ಲೈನ್ ಇಲ್ಲ, ಆದರೆ ಈ ತಿಂಗಳು ಉಚಿತ ವಿದ್ಯುತ್ ಸಿಗಬೇಕೆಂದರೆ ಜುಲೈ 25ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದರೆ ಆಗಸ್ಟ್ ತಿಂಗಳ ಬಿಲ್ ನಲ್ಲಿ ಶೂನ್ಯ ಬಿಲ್ ಎಂದು ಬರುತ್ತದೆ. ಇಲ್ಲದಿದ್ದರೆ ನಾಗರಿಕರು ಹಣ ಪಾವತಿ ಮಾಡಬೇಕಾಗುತ್ತದೆ ಎಂದರು.

86.5 ಲಕ್ಷ ಜನರಿಂದ ಅರ್ಜಿ: ಗೃಹ ಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ತಿಂಗಳಿಗೆ ಬರುತ್ತದೆ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್ ಜಾರಿಯಾಗಲಿದೆ. ಗೃಹಜ್ಯೋತಿಗೆ ಅರ್ಜಿ ಹಾಕದವರಿಗೆ ಮುಂದಿನ ತಿಂಗಳು ಬಿಲ್ ಬರುತ್ತೆ. ‘ಗೃಹಜ್ಯೋತಿ’ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಆದಷ್ಟು ಬೇಗ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಒಳ್ಳೆಯದು.

ಅರ್ಜಿ ಹಾಕಲು ದಿನಾಂಕದ ಗಡುವು ಇಲ್ಲ. ಆದರೆ ಸರ್ಕಾರದಿಂದ ಉಚಿತ ಸಿಗಬೇಕೆಂದರೆ ನಾಗರಿಕರು ಅರ್ಜಿ ಹಾಕಲೇಬೇಕು. ಆದಷ್ಟು ಬೇಗನೆ ಅರ್ಜಿ ಹಾಕಿದರೆ ಜನರಿಗೇ ಲಾಭ, ಇಲ್ಲದಿದ್ದರೆ ವಿದ್ಯುತ್ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!