ರಾಜ್ಯ

ಬೆಂಗಳೂರು: ಕೆರೆಯೊಳಗೆ ಅಕ್ರಮ ಕಟ್ಟಡ ನಿರ್ಮಾಣ: ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು?

Srinivasamurthy VN

ಬೆಂಗಳೂರು: ವಿಭೂತಿಪುರ ಕೆರೆಗೆ ಪ್ಲಾಸ್ಟಿಕ್ ತ್ಯಾಜ್ಯ ಸುರಿ ತುಂಬಿದ ಪ್ರಕರಣ ಹಸಿರಾಗಿರುವಂತೆಯೇ ಕೆರೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ವಿಷಯ ತಿಳಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೆರೆ ಎಂಜಿನಿಯರ್‌ಗೆ ತಿಳಿಸಿದಾಗ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಲ ಕಟ್ಟಡಗಳನ್ನು ನೆಲಸಮಗೊಳಿಸಲಿದೆ ಎಂದು ಕೆರೆ ಕಾರ್ಯಕರ್ತರು ಆರೋಪಿಸಿದ್ದಾರೆ. ಸುನೀತಾ ಮತ್ತು ಆಕೆಯ ಪತಿ ಅಲೆಕ್ಸ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಕಂಬಗಳ ಮೂಲಕ ಲಿಂಟಲ್ ಮಟ್ಟಕ್ಕೆ ತಲುಪಿದ ಕಟ್ಟಡವನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ, ಅದು ಬೇಲಿಯನ್ನು ಒಡೆದು ಬಫರ್ ಝೋನ್ ಅನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವಾರ ಇಲ್ಲಿನ ನಿವಾಸಿಗಳು ಹಾಗೂ ಕಾರ್ಯಕರ್ತರು ವಿಭೂತಿಪುರ ಕೆರೆ ಕ್ಷೇಮಾಭಿವೃದ್ಧಿ ಸಂಘದವರು ಸೇರಿ ಕೆರೆ ಏರಿಯಲ್ಲಿ ಧರಣಿ ನಡೆಸಿ, ಅಧಿಕಾರಿಗಳು ಕೂಡಲೇ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಾರಂಭದಲ್ಲಿ ಮಹದೇವಪುರ ವಲಯದ ಸಂಬಂಧಪಟ್ಟ ಕೆರೆ ಅಧಿಕಾರಿಗೆ ದೂರು ನೀಡಿದಾಗ ‘ಅವರೇ ನಿರ್ಮಿಸಲಿ’ ಎಂದು ಪ್ರತಿಕ್ರಿಯಿಸಿದರು. ಆದರೆ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ತಲೆ ಎತ್ತಿರುವ ಕಟ್ಟಡವನ್ನು ತೆರವುಗೊಳಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಸಂಘದ ಸ್ವಯಂಸೇವಕರೊಬ್ಬರು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಮುಖ್ಯ ಇಂಜಿನಿಯರ್ ವಿಜಯಕುಮಾರ ಹರಿದಾಸ್ ಮಾತನಾಡಿ, 'ಈ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲವಾಗಿದ್ದು, ಕೆರೆ ಒತ್ತುವರಿ ತೆರವು ಮಾಡುವಂತೆ ಸಂಬಂಧಪಟ್ಟ ಇಂಜಿನಿಯರ್‌ಗೆ ಸೂಚಿಸುವುದಾಗಿ ತಿಳಿಸಿದರು.

ಇತ್ತೀಚೆಗಷ್ಟೇ ಬಿಬಿಎಂಪಿ ಕಾಯ್ದೆ, 2020ರ ಸೆಕ್ಷನ್ 248 (1) ರ ಅಡಿಯಲ್ಲಿ ನಿರ್ಮಾಣವನ್ನು ನಿಲ್ಲಿಸುವಂತೆ ಪಾಲಿಕೆ ನೋಟಿಸ್ ನೀಡಿತ್ತು ಎಂದು ಹೇಳಲಾಗಿದೆ. ಪಾಲಿಕೆಯವರು ನೋಟಿಸ್ ನೀಡುತ್ತಾರಾದರೂ ಕೆರೆ ಒತ್ತುವರಿ ವಿಚಾರದಲ್ಲಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದಾರೆ.
 

SCROLL FOR NEXT