ಸಂಗ್ರಹ ಚಿತ್ರ 
ರಾಜ್ಯ

ಆಧುನಿಕ ಸ್ಪರ್ಶದೊಂದಿಗೆ ಸಜ್ಜುಗೊಂಡ 'ವಿವಿ ಪುರಂ ಫುಡ್ ಸ್ಟ್ರೀಟ್': ಸ್ವಾತಂತ್ರ್ಯೋತ್ಸವಕ್ಕೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದು!

ಸಿಲಿಕಾನ್ ಸಿಟಿ ಬೆಂಗಳೂರು ಜನತೆಯ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ ಆಧುನಿಕ ಸ್ಪರ್ಶದೊಂದಿಗೆ ಪುನರಾರಂಭಕ್ಕೆ ಸಜ್ಜುಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಜನತೆಗೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆಯ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ ಆಧುನಿಕ ಸ್ಪರ್ಶದೊಂದಿಗೆ ಪುನರಾರಂಭಕ್ಕೆ ಸಜ್ಜುಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಜನತೆಗೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದಾಗಿದೆ.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿ.ವಿ ಪುರಂ ಫುಡ್ ಸ್ಟ್ರೀಟ್'ನ್ನು ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ನಿನ್ನೆಯಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ಮತ್ತು ದಕ್ಷಿಣ ವಲಯ ಆಯುಕ್ತ ಜಯರಾಮ ರಾಯಪುರ ಅವರು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರೊಂದಿಗೆ ಫುಡ್ ಸ್ಟ್ರೀಟ್ ನ್ನು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯರಾಮ್ ರಾಯಪುರ ಅವರು, ಡಿಸೆಂಬರ್ ತಿಂಗಳಿನಲ್ಲಿ ಫುಡ್ ಸ್ಟ್ರೀಟ್ ಮರು ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಆಗಸ್ಟ್ 15ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. 6-7 ತಿಂಗಳ ಕಾಲ ವರ್ತಕರನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕೇಬರ್ ಹಾಕುವುದು, ಚರಂಡಿಗಳ ನಿರ್ಮಾಣ ಹಾಗೂ ಪೈಪ್ ಗಳ ಜೋಡಣೆ ಮಾಡುವುದು ಸವಾಲಾಗಿ ಪರಿಣಮಿಸಿತ್ತು. ಆದರೆ, ಜನರು ಬಿಬಿಎಂಪಿಯ ಮನವಿಗೆ ಸಹಕರಿಸಿದ್ದಾರೆ. ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಿದ್ದಾರೆ. ಇದೀಗ ಬಹುತೇಕ ಕಾಮಗಾರಿ ಕೆಲಸಗಳು ಪೂರ್ಣಗೊಂಡಿದ್ದು, ಗ್ರೀಸ್ ಟ್ರ್ಯಾಪ್ ಗಳು ಹಾಕುವುದು ಬಾಕಿ ಉಳಿದಿದೆ. ಇಲ್ಲದೆ, ಕ್ಯಾರೇಜ್ ವೇಯಲ್ಲಿ ವರ್ಣರಂಜಿತ ಬಣ್ಣದ ಕಾಂಕ್ರೀಟ್ ರಸ್ತೆ ನಿರ್ಮಾಣ, ಕರ್ಬ್ ಸ್ಟೋನ್ ಗಳ ಅಳವಡಿಕೆ,  ಪಾದಚಾರಿ ಮಾರ್ಗ ನಿರ್ಮಾಣ, ಎಚ್‌ಡಿಡಿ ಕೇಬಲ್‌ಗಳೊಂದಿಗೆ ಬೀದಿ ದೀಪದ ಕಂಬಗಳ ಅಳವಡಿಕೆ, ಎಲ್ಲಾ ಅಂಗಡಿಗಳಿಗೆ ಕೆನೋಪಿಗಳ ಅಳವಡಿಕೆ, ಪ್ರವೇಶ ಪ್ಲಾಜಾ, ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಸುತ್ತಮುತ್ತ ಸುಂದರೀಕರಣಗೊಳಿಸುವುದು ಬಾಕಿ ಇದೆ. ಆ ಕೆಲಸಗಳೂ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಲಿದೆ. ಆಗಸ್ಟ್ 15ರೊಳಗೆ ಫುಡ್ ಸ್ಟ್ರೀಟ್ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಶಾಸಕ ಉದಯ್ ಗರುಡಾಚಾರ್ ಮಾತನಾಡಿ, 5 ಕೋಟಿ ರೂ. ಶಾಸಕರ ಅನುದಾನವನ್ನು ಫುಡ್ ಸ್ಟ್ರೀಟ್ ಮರುನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಲಾಗಿದೆ, ‘ರಸ್ತೆ ವಾಕರ್ ಝೋನ್ ಆಗಲಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀಸಲಾದ ಪಾರ್ಕಿಂಗ್ ಜಾಗದಲ್ಲಿ ನಾಗರಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಹೇಳಿದರು.

ಫುಡ್ ಸ್ಟ್ರೀಟ್ ಆರಂಭವಾದ ಬಳಿಕ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಣ ಮತ್ತು ಒದ್ದೆ ತ್ಯಾಜ್ಯಕ್ಕಾಗಿ ಪ್ರತ್ಯೇಕವಾಗಿ ಬಣ್ಣದ ಕೋಡೆಡ್ ಡಸ್ಟ್ ಬಿನ್ ಗಳನ್ನು ಇಡಲಾಗುತ್ತದೆ. ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತದೆ. ಪೀಕ್ ಅವರ್ ನಲ್ಲಿ ಹೊಯ್ಸಳ ವಾಹನಗಳು ಕೂಡ ಗಸ್ತು ತಿರುಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT