ಪ್ರೀತಿಗೆ ಕುಟುಂಬಸ್ಥರ ವಿರೋಧ: ಪಶ್ಚಿಮ ಬಂಗಾಳದ ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಪ್ರಿಯಕರ ಆತ್ಮಹತ್ಯೆಗೆ ಶರಣಾದ ವಿಚಾರದ ತಿಳಿದ ಪ್ರಿಯತಮೆ ಕೂಡ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಸಮೀಪ ನಡೆದಿದೆ.
ಬೆಂಗಳೂರು: ಪ್ರಿಯಕರ ಆತ್ಮಹತ್ಯೆಗೆ ಶರಣಾದ ವಿಚಾರದ ತಿಳಿದ ಪ್ರಿಯತಮೆ ಕೂಡ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಸಮೀಪ ನಡೆದಿದೆ.
ಪಶ್ಚಿಮ ಬಂಗಾಳ ರಾಜ್ಯ ಮೂಲದ ದೀಪಕ್ ಕುಮಾರ್ (21) ಹಾಗೂ ಎಸ್.ಧಾರಾ (21) ಮೃತ ದುರ್ದೈವಿಗಳು. ತನ್ನ ಮನೆಯಲ್ಲಿ ಗುರುವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ದೀಪಕ್ ಆತ್ಮಹತ್ಯೆಗೆ ಶರಣಾಗಿದ್ದರೆ, ಮರುದಿನ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಬಿಗಿದು ಧಾರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಳ್ಳಂದೂರು ಕೋಡಿಯ ಕಾರ್ಮಿಕರ ಜೋಪಡಿಯಲ್ಲಿ ಪ್ರತ್ಯೇಕಾಗಿ ಪಶ್ಚಿಮ ಬಂಗಾಳ ಮೂಲದ ದೀಪಕ್ ಹಾಗೂ ಧಾರಾ ನೆಲೆಸಿದ್ದರು. ದೀಪಕ್ ಗಾರೆ ಕೆಲಸ ಹಾಗೂ ಧಾರಾ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಒಂದೇ ರಾಜ್ಯದವರಾಗಿದ್ದರಿಂದ ಇಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿದೆ.
ಆದರೆ, ಇದಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಧಾರಾಳಿಗೆ ಬೇರೊಬ್ಬ ಯುವಕನ ಜೊತೆಗೆ ಆಕೆಯ ಕುಟುಂಬಸ್ಥರು ವಿವಾರ ನಿಶ್ಚಯ ಮಾಡಿದ್ದಾರೆ. ಈ ವಿಚಾರ ತಿಳಿದ ದೀಪಕ್ ಬೇಸತ್ತು ಗುರುವಾರ ಕೆಲಸಕ್ಕೆ ತೆರಳದೆ ಶೆಡ್ ನಲ್ಲೇ ಉಳಿದುಕೊಕಂಡಿದ್ದಾನೆ. ಮಧ್ಯಾಹ್ನ ಸ್ನೇಹಿತರಿಗೆ ಗುಡ್ ಬೈ ಎಂದು ಮಸೇಜ್ ಮಾಡಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೀಪಕ್ ಆತ್ಮಹತ್ಯೆ ವಿಚಾರ ತಿಳಿದ ಧಾರಾ ಕೂಡ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾಳೆ. ಮಾರತ್ತಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.