ರಾಜ್ಯ

ಪಶ್ಚಿಮ ಘಟ್ಟಗಳಲ್ಲಿನ ಬೆಂಕಿ ನಂದಿಸಲು ಕೈಜೋಡಿಸಿದ ಕರ್ನಾಟಕ-ಗೋವಾ ಸರ್ಕಾರ!

Manjula VN

ಬೆಳಗಾವಿ: ಕರ್ನಾಟಕದ ಗಡಿಗೆ ಹೊಂದಿಕೊಂಡಂತಿರುವ ಗೋವಾದ ಮಹಾದಾಯಿ ವನ್ಯಜೀವಿ ಧಾಮದಲ್ಲಿ ಭಾರಿ ಕೆಲ ದಿನಗಳ ಹಿಂದೆ ಕಾಡ್ಗಿಚ್ಚು ಕಾಣಿಸಿಕೊಂಡು, ಸಾಕಷ್ಟು ಅರಣ್ಯ ನಾಶಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗಡಿಯುದ್ದಕ್ಕೂ ಪಶ್ಚಿಮ ಘಟ್ಟಗಳಲ್ಲಿ ಸಸ್ಯ ಮತ್ತು ಪ್ರಾಣಿಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಲು ಗೋವಾ ಸರ್ಕಾರವು, ಕರ್ನಾಟಕದೊಂದಿಗೆ ಕೈಜೋಡಿಸಲು ಮುಂದಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಎದುರಾಗುವ ಅಗ್ನಿ ಅವಘಡಗಳ ನಿಯಂತ್ರಿಸಲು ಗೋವಾ ಮತ್ತು ಕರ್ನಾಟಕ ಸರ್ಕಾರಗಳು, ಅಂತಾರಾಜ್ಯ ತಂತ್ರ ರೂಪಿಸು ಮುಂದಾಗಿವೆ ಎಂದು ತಿಳಿದುಬಂದಿದೆ.

ಗೋವಾ ಮತ್ತು ಕರ್ನಾಟಕದ ಕಾಡುಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲು ಕರ್ನಾಟಕದೊಂದಿಗೆ ಪರಿಣಾಮಕಾರಿ ಸಮನ್ವಯಕ್ಕಾಗಿ ಗೋವಾ ಸರ್ಕಾರ, ಉನ್ನತ ಅರಣ್ಯ ಅಧಿಕಾರಿ ಎ ಜೆಬಾಸ್ಟಿನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ ಎಂದು ವರದಿಗಳು ತಿಳಿಸಿವೆ.

ಬಿಕ್ಕಟ್ಟಿನ ಸಮಯದಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿ ನಿರ್ವಹಣೆ ಮಾಡಲು ನೋಡಲ್ ಅಧಿಕಾರಿಗೆ ಮಾಹಿತಿ ನೀಡುವಂತೆ ಗೋವಾ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಉಭಯ ರಾಜ್ಯಗಳ ನೋಡಲ್ ಅಧಿಕಾರಿಗಳು ನೈಜ-ಸಮಯದ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಅಧಿಕಾರಿಗಳು ಎಚ್ಚರಿಕೆಯನ್ನು ಕಾಯ್ದುಕೊಳ್ಳಲು ಹಾಗೂ ನಿರ್ಣಾಯ ಸಮಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ.

ಕಾಡ್ಗಿಚ್ಚು ಆತಂಕ ಹಿನ್ನೆಲೆಯಲ್ಲಿ ಈಗಾಗಲೇ ಗೋವಾ ಮತ್ತು ಕರ್ನಾಟಕ ನಡುವಿನ ಗಡಿಯಲ್ಲಿ ಗಸ್ತು ತಿರುಗುವಂತೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಗೋವಾ ರಾಜ್ಯದ ಅರಣ್ಯ, ನಗರಾಭಿವೃದ್ಧಿ ಮತ್ತು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಕಾಡ್ಗಿಚ್ಚಿನ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ,

ಮಾರ್ಚ್ 14 ರಂದು ಸಂಜೆ 4 ಗಂಟೆಯವರೆಗೆ ಅಗ್ನಿ ಅವಘಡಗಳು ಕಂಡುಬಂದಿಲ್ಲ. ಸುಮಾರು 300 ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಡೆರೊಡೆಮ್, ಸುರ್ಲಾ ಮ್ಹಡೆ ಮುಂತಾದ ಪ್ರದೇಶಗಳಲ್ಲಿ  ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಗೋವಾದ ಟಿಸ್ಕ್ ಉಸ್ಗಾವೊ ಪ್ರದೇಶದ ಯುವಕರು ಪಿಲಿಯೆ ದರ್ಬಂದೋರಾದಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಕಳೆದ ನಾಲ್ಕು ದಿನಗಳಿಂದ ಗೋವಾ ಅರಣ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿರುವುದನ್ನು ವಿಶ್ವಜಿತ್ ರಾಣೆಯವರು ಶ್ಲಾಘಿಸಿದ್ದಾರೆ.

SCROLL FOR NEXT