ಚುನಾವಣಾ ಚಿನ್ಹೆಗಳು 
ರಾಜ್ಯ

ಹಸಿರು ಮೆಣಸಿನಕಾಯಿ, 7 ರೇಯ್ಸ್ ಪೆನ್ ನಿಬ್, ಕೇಕ್, ವಜ್ರ ಮತ್ತು ಸಿಸಿಟಿವಿ ಕ್ಯಾಮೆರಾ: ಪಕ್ಷೇತರರಿಂದ ತರಾವರಿ ಚಿಹ್ನೆ ಆಯ್ಕೆ

ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲದೇ ನೂರಾರು ಪಕ್ಷೇತರ ಅಥವಾ ಸ್ವತಂತ್ರ್ಯ ಅಭ್ಯರ್ಥಿಗಳೂ ಸ್ಪರ್ದಿಸಿದ್ದು ಅವರಿಗೆ ತರಹೇವಾರಿ ಚುನಾವಣಾ ಚಿನ್ಹೆಗಳನ್ನು ನೀಡಲಾಗಿದೆ.

ಬೆಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲದೇ ನೂರಾರು ಪಕ್ಷೇತರ ಅಥವಾ ಸ್ವತಂತ್ರ್ಯ ಅಭ್ಯರ್ಥಿಗಳೂ ಸ್ಪರ್ದಿಸಿದ್ದು ಅವರಿಗೆ ತರಹೇವಾರಿ ಚುನಾವಣಾ ಚಿನ್ಹೆಗಳನ್ನು ನೀಡಲಾಗಿದೆ.

ಹಸಿರು ಮೆಣಸಿನಕಾಯಿ, 7 ಕಿರಣಗಳನ್ನು ಹೊಂದಿರುವ ಪೆನ್ ನಿಬ್, ಕೇಕ್, ಡೈಮಂಡ್, ರೋಡ್ ರೋಲರ್ ಮತ್ತು ಬ್ಯಾಟ್ಸ್‌ಮನ್... ಅರೆ ಅವೆಲ್ಲ ಏನು ಎಂದು ಕೇಳುತ್ತಿರುವಿರಾ.. ಇವೆಲ್ಲವೂ ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ತಮ್ಮ ತಮ್ಮ ವಿಭಿನ್ನ ಚಿಹ್ನೆಗಳು. ಬಹುತೇಕ ಜನರು ಪ್ರಮುಖ ರಾಷ್ಟ್ರೀಯ ಪಕ್ಷಗಳ ಚುನಾವಣಾ ಚಿಹ್ನೆಗಳ ಬಗ್ಗೆ ತಿಳಿದಿದ್ದಾರೆ.. ಕಮಲ, ಕೈ, ತಲೆಯ ಮೇಲೆ ಭತ್ತ ಹೊತ್ತ ರೈತ ಮಹಿಳೆ, ಆಟೋ ಮತ್ತು ಪೊರಕೆ ಇತ್ಯಾದಿ.

ಆದರೆ ಈ ಸುದ್ದಿಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆ ಮಾಡಿದ ಕೆಲವು ಅಸಾಮಾನ್ಯ ಚುನಾವಣಾ ಚಿಹ್ನೆಗಳ ಕುರಿತು ಮಾಹಿತಿ ನೀಡಲಾಗಿದೆ.

ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಅವರು ಹೆಲಿಕಾಪ್ಟರ್, ಲ್ಯಾಪ್‌ಟಾಪ್, ರಬ್ಬರ್ ಸ್ಟ್ಯಾಂಪ್, ಸಿತಾರ್, ವೆಲ್ ಅಥವಾ ಬಾವಿ, ಡೋರ್‌ಬೆಲ್, ಬೇಬಿ ವಾಕರ್, ಬೈನಾಕ್ಯುಲರ್, ಸ್ವಿಚ್‌ಬೋರ್ಡ್, ಫೋನ್ ಚಾರ್ಜರ್, ಗಿಫ್ಟ್ ಪ್ಯಾಕ್, ಗ್ಯಾಸ್ ಸಿಲಿಂಡರ್, ಮ್ಯಾನ್ ಹೀಗೆ 50ಕ್ಕೂ ಹೆಚ್ಚು ವಿವಿಧ ಚಿಹ್ನೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತುತ್ತೂರಿ, ಫುಟ್ಬಾಲ್, ವಾಕಿಂಗ್ ಸ್ಟಿಕ್, ಅನಾನಸ್, ದ್ರಾಕ್ಷಿ, ಗ್ರಾಮಫೋನ್, ಟ್ಯೂಬ್ ಲೈಟ್, ಕೊಳಲು, ಟೈರ್, ಏರ್ ಕಂಡಿಷನರ್, ಸ್ಪ್ಯಾನರ್, ಕಡಲೆಕಾಯಿ, ಸಿಸಿಟಿವಿ ಕ್ಯಾಮೆರಾ, ಶೂ, ಕಾಟ್ ಇತ್ಯಾದಿಗಳೂ ಈ ಪಟ್ಟಿಯಲ್ಲಿವೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಾಲಿಸಿ ಮತ್ತು ಗವರ್ನೆನ್ಸ್‌ನ ಸ್ವತಂತ್ರ ಕಾನೂನು ಮತ್ತು ನೀತಿ ಸಲಹೆಗಾರ ಮತ್ತು ಸಂದರ್ಶಕ ಅಧ್ಯಾಪಕ ಮ್ಯಾಥ್ಯೂ ಇಡಿಕುಲ್ಲಾ ಅವರು ಈ ಬಗ್ಗೆ ಮಾತನಾಡಿದ್ದು, “ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಚುನಾವಣಾ ಆಯೋಗವು ನೀಡುವ ಉಚಿತ ಚಿಹ್ನೆಗಳ ಪೂರ್ವ ಅಸ್ತಿತ್ವದಲ್ಲಿರುವ ಪಟ್ಟಿಯಿಂದ ಆಯ್ಕೆ ಮಾಡಬೇಕು. . ಅವರು ತಮ್ಮದೇ ಆದ ಚಿಹ್ನೆಯನ್ನು ರಚಿಸಲು ಸಾಧ್ಯವಿಲ್ಲ. ಮೂರು ಚಿಹ್ನೆಗಳ ಆದ್ಯತೆಗಳನ್ನು ನೀಡಲು ಅವರನ್ನು ಕೇಳಲಾಗುತ್ತದೆ ಮತ್ತು ಅವುಗಳಲ್ಲಿ ಒಂದನ್ನು ಅವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಚುನಾವಣಾ ಚಿಹ್ನೆಗಳ ಹಿಂದಿನ ಇತಿಹಾಸವನ್ನು ಹಂಚಿಕೊಂಡ ಇಡಿಕುಲ್ಲಾ, “ಸ್ವಾತಂತ್ರ್ಯದ ನಂತರ, ಅನಕ್ಷರಸ್ಥ ಜನಸಾಮಾನ್ಯರಿಗೆ ಚಿಹ್ನೆಗಳನ್ನು ನೋಡುವ ಮೂಲಕ ಮತ ಚಲಾಯಿಸಲು ಸಹಾಯ ಮಾಡಲು ಚುನಾವಣಾ ಚಿಹ್ನೆಗಳನ್ನು ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಚುನಾವಣಾ ಚಿನ್ಹೆಗಳ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ಈಗ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಓದುವ ಮೂಲಕ ಜನರು ತಮ್ಮ ಮತಗಳನ್ನು ಚಲಾಯಿಸಲು ಸಮರ್ಥರಾಗಿದ್ದಾರೆ. ತಮ್ಮ ಚುನಾವಣಾ ಚಿಹ್ನೆಗಳಿಂದ ಸುಲಭವಾಗಿ ಗುರುತಿಸಲ್ಪಡುವ ಪ್ರಮುಖ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಪ್ರಮುಖವಲ್ಲದ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ವಿಷಯಕ್ಕೆ ಬಂದಾಗ ಅದು ಸೀಮಿತ ಪಾತ್ರವನ್ನು ಹೊಂದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT