ರಾಜ್ಯ

ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ಹಾರಾಟ ಸೇವೆ: ಕೊನೆಗೂ ಡಿಜಿಸಿಎ ಅನುಮೋದನೆ

Srinivasamurthy VN

ಬೆಂಗಳೂರು: ಬಹು ನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯ ವಿಮಾನ ಹಾರಾಟ ಸೇವೆಗೆ ಕೊನೆಗೂ ಡಿಜಿಸಿಎ ಅನುಮೋದನೆ ನೀಡಿದೆ.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಕನಸು ಇದೀಗ ಈಡೇರಿದ್ದು, ನಿಲ್ದಾಣದ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಫ್ ಸೇವೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಕೊನೆಗೂ ಅನುಮತಿ ನೀಡಿದ್ದಾರೆ. ಈ ಹಿಂದೆ ಕಲಬುರಗಿ ವಿಮಾನ ನಿಲ್ಧಾಣ (Kalaburagi airport) ಆರಂಭವಾಗಿ ಮೂರು ವರ್ಷಗಳಾಗಿದ್ದು ಇಲ್ಲಿವರಗೆ ರಾತ್ರಿ ವಿಮಾನಗಳ ಲ್ಯಾಂಡಿಗ್ ಮತ್ತು ಟೇಕಾಫ್ ವ್ಯವಸ್ಥೆ ಇರಲಿಲ್ಲ. 

ಇದರಿಂದ ರಾತ್ರಿ ಸಮಯದಲ್ಲಿ ವಿಮಾನಗಳ ಹಾರಾಟ ವ್ಯವಸ್ಥೆಗೆ ತೊಂದರೆಯಾಗಿತ್ತು. ಬಳಿಕ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್​ಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಬಳಿಕ ಡಿಜಿಸಿಎಯ ತಾಂತ್ರಿಕ ತಂಡ ಕಳೆದ ಏಪ್ರಿಲ್ ನಲ್ಲಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ನೈಟ್ ಲ್ಯಾಂಡಿಗ್ ಮತ್ತು ಟೇಕಾಫ್ ಕುರಿತು ಡಿಜಿಸಿಎಗೆ ವರದಿ ಸಲ್ಲಿಕೆ ಮಾಡಿತ್ತು. ಈ ವರದಿಯಾಧಾರದ ಮೇಲೆ ಡಿಜಿಸಿಎ ಇದೀಗ ಅಧಿಕೃತವಾಗಿ ರಾತ್ರಿ ವೇಳೆಯ ವಿಮಾನ ಹಾರಾಟ ಸೇವೆಗೆ ಅನುಮತಿ ನೀಡಿದೆ.

ಸದ್ಯ ಮುಂಜಾನೆ 7 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ವಿಮಾನಗಳ ಹಾರಾಟಕ್ಕೆ ಅವಕಾಶವಿತ್ತು. ಇನ್ನು ನೈಟ್ ಲ್ಯಾಂಡಿಂಗ್ ಮತ್ತು ಟೇಕಾಫ್ ನಿಂದ ರೋಗಿಗಳನ್ನು ದಿನದ ಇಪ್ಪತ್ನಾಲ್ಕು ಗಂಟೆ ಕೂಡಾ ಏರ್ ಲಿಪ್ಟ್ ಮಾಡಲು ಅನಕೂಲವಾಗಲಿದೆ. ಈ ಮೊದಲು ಹಗಲೊತ್ತಿನಲ್ಲಿ ಮಾತ್ರ ಏರ್‌ ಲಿಪ್ಟ್ ಮಾಡಲು ಅವಕಾಶವಿತ್ತು.

ಇನ್ನು ಸದ್ಯ ಕಲಬುರಗಿ ವಿಮಾನ ನಿಲ್ದಾಣದಿಂದ ಮೂರು ಮಾರ್ಗದಲ್ಲಿ ಮಾತ್ರ ವಿಮಾನಗಳ ಹಾರಾಟ ಸೇವೆಯಿದೆ. ಕಲಬುರಗಿಯಿಂದ ಬೆಂಗಳೂರು, ಕಲಬುರಗಿಯಿಂದ ಹಿಂಡನ್, ಕಲಬುರಗಿಯಿಂದ ತಿರುಪತಿಗೆ ಸ್ಟಾರ್ ಮತ್ತು ಅಲೈನ್ಸ್ ಕಂಪನಿಗಳು ಸೇವೆ ನೀಡುತ್ತಿವೆ. ಇದರ ಜೊತೆಗೆ ಇನ್ನು ಐದು ವಿಮಾನಗಳ ಕಂಪನಿಗೆ ಇಲ್ಲಿಂದ ಸೇವೆ ಆರಂಭಿಸಲು ಕೂಡಾ ಮನವಿ ಮಾಡಿದ್ದಾರೆ.

SCROLL FOR NEXT